ಭ್ರಷ್ಟ ಅಧಿಕಾರಿಗಳು ಲಂಚ ಪಡೆದುಕೊಳ್ಳುವುದೂ ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದರೂ ಸಹ ತಮಗಿರುವ ಪ್ರಭಾವ ಬಳಸಿ ವಿಚಾರಣೆ ವಿಳಂಬವಾಗುವಂತೆ ನೋಡಿಕೊಳ್ಳುತ್ತಾರೆ.
ಇದೀಗ ಸುಪ್ರೀಂ ಕೋರ್ಟ್ ಭ್ರಷ್ಟ ಅಧಿಕಾರಿಗಳಿಗೆ ದೊಡ್ಡ ಶಾಕ್ ನೀಡಿದೆ. ಇಂತಹ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿಚಾರಣೆಗೆ ನಾಲ್ಕು ತಿಂಗಳೊಳಗಾಗಿ ಅನುಮತಿ ನೀಡುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪಿ.ಎಸ್. ನರಸಿಂಹ ಅವರಿದ್ದ ಪೀಠ ಮಂಗಳವಾರದಂದು ಈ ಮಹತ್ವದ ತೀರ್ಪು ನೀಡಿದ್ದು, ವಿಚಾರಣೆಯನ್ನು ವಿಳಂಬ ಮಾಡುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತೆ ಎಂದು ಹೇಳಿದೆ.