ಡಿಯೋರಿಯಾ (ಉತ್ತರ ಪ್ರದೇಶ): ಭ್ರಷ್ಟಾಚಾರದ ಬಹುದೊಡ್ಡ ಉದಾಹರಣೆ ಎಂದು ಕರೆಯುವ ವಿಡಿಯೋ ಒಂದು ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದ ಘಟನೆ.
ವ್ಯಕ್ತಿಯೊಬ್ಬರು ಹೊಸದಾಗಿ ಹಾಕಿದ ರಸ್ತೆಯನ್ನು ತನ್ನ ಕೈಗಳಿಂದ ತೆಗೆಯುತ್ತಿರುವ ವಿಡಿಯೋ ಆಗಿದೆ. ಕಳಪೆ ಗುಣಮಟ್ಟದ ರಸ್ತೆಯನ್ನು ಹೇಗೆ ನಿರ್ಮಿಸಲಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ. ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಹೇಗೆ ಗುಳುಂ ಮಾಡಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಇದರ ವಿಡಿಯೋ ಅನ್ನು ಅಹ್ಮದ್ ಕಬೀರ್ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ನಿಮಿಷದ ವೈರಲ್ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ರಸ್ತೆಯನ್ನು ಕೀಳುವುದನ್ನು ನೋಡಬಹುದು.
ರಸ್ತೆ ನಿರ್ಮಿಸಲು ಆಯ್ಕೆ ಮಾಡಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದನ್ನು ಇದರಲ್ಲಿ ನೋಡಬಹುದಾಗಿದೆ.
https://twitter.com/AhmedKhabeer_/status/1600447567011008513?ref_src=twsrc%5Etfw%7Ctwcamp%5Etweetembed%7Ctwterm%5E1600447567011008513%7Ctwgr%5E010941ac49524da95ec62192b95ac89084e5fc3d%7Ctwcon%5Es1_&ref_url=https%3A%2F%2Fwww.india.com%2Fviral%2Fcorruption-video-man-scoops-out-newly-constructed-road-with-bare-hands-in-ups-deoria-clip-goes-viral-5791298%2F