ಬಾಹ್ಯಾಕಾಶದಿಂದ ಕ್ಷುದ್ರ ಗ್ರಹವೊಂದು ಭೂಮಿಗೆ ಬರಲಿದೆ ಎಂದು ನಾಸಾ ಎಚ್ಚರಿಕೆ ಕೊಟ್ಟಿದೆ. ಸುಮಾರು ಒಂದು ಮನೆಯಷ್ಟು ಈ ಗ್ರಹ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವಾರವೇ ಈ ಬಗ್ಗೆ ನಾಸಾ ಎಚ್ಚರಿಕೆ ಕೊಟ್ಟಿತ್ತು. ಅದರಂತೆ ಇಂದು ಈ ಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ.
ಡಿಮೋಫಾರ್ಸ್ನಷ್ಟು ದೊಡ್ಡದಾದ ಕ್ಷುದ್ರಗ್ರಹವು ಭೂಮಿಯ ಸಮೀಪ ಬರುವುದಿಲ್ಲ. ಆದರೆ ಚಿಕ್ಕ ಚಿಕ್ಕ ಕ್ಷುದ್ರಗಳು ಆಗಾಗ ಭೂಮಿಗೆ ಬಂದು ಅಪ್ಪಳಿಸುವುದು ನಡೆಯುತ್ತಲೇ ಇರುತ್ತದೆಯಂತೆ. ಗಂಟೆಗೆ 12, 276 ಕಿಲೋಮೀಟರ್ ವೇಗದಲ್ಲಿ ಇದು ಭೂಮಿಯತ್ತ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದು ಚಂದ್ರನಿಂದ ಕೆಲವೇ ಲಕ್ಷ ಕಿಮೀಗಳ ದೂರ ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಇನ್ನು ಈ ಕ್ಷುದ್ರಗ್ರಹದ ಹೆಸರು ಈ ಎಸ್ಜಡ್2 ಎನ್ನಲಾಗಿದೆ. ಇದರ ಗಾತ್ರ 30 ಫೀಟ್ ಉದ್ದವಿರಬಹುದು ಎನ್ನಲಾಗಿದೆ. ಇದರ ಜೊತೆಗೆ ಎಸ್ಡಿ10 ಎಂಬ ಹೆಸರಿನ ಕ್ಷುದ್ರಗ್ರಹವು ಮಂಗಳವಾರ ಭೂಮಿಯ ಸನಿಹದಿಂದ ಹಾದು ಹೋಗಲಿದೆ ಎಂದು ಹೇಳಲಾಗುತ್ತಿದೆ. ಇದು ಕೂಡ ಸುಮಾರು 40 ಫೀಟ್ ಗಾತ್ರದ್ದು ಎಂದು ಅಂದಾಜಿಸಲಾಗಿದೆ.