alex Certify ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿಯನ್ನ ಹಾದು ಹೋಗಲಿದೆ ದೈತ್ಯಾಕಾರದ ಮತ್ತೊಂದು ಕ್ಷುದ್ರಗ್ರಹ

ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಸುಮಾರು ಎರಡು ಪಟ್ಟು ಗಾತ್ರವಿರುವ ಆಸ್ಟರೋಯ್ಡ್(ಕ್ಷುದ್ರಗ್ರಹ) ಒಂದು ಜನವರಿ 18, 2022 ರಂದು ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ ಎಂದು ನಾಸಾ ಹೇಳಿದೆ. ಇದು ವರ್ಷದಲ್ಲಿ ಸಂಭವಿಸಲಿರುವ ನಿರೀಕ್ಷಾ ಕಾಸ್ಮಿಕ್ ಘಟನೆಗಳ ಲಿಸ್ಟ್ ನಲ್ಲಿ ಮೊದಲನೆಯದಾಗಿದೆ.

ನಾಸಾದ ಸೆಂಟರ್ ಫಾರ್ ನಿಯರ್ ಅರ್ತ್ ಆಬ್ಜೆಕ್ಟ್ ಸ್ಟಡೀಸ್ (CNEOS) ಪ್ರಕಾರ, ಸ್ಪೇಸ್ ರಾಕ್ – ಆಸ್ಟರಾಯ್ಡ್ 7482 ಗಂಟೆಗೆ 69,200 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ‌. ಈ ಆಸ್ಟರಾಯ್ಡ್ ಅನ್ನು ಅಪಾಯಕಾರಿ ಎಂದು ವರ್ಗೀಕರಿಸಲಾಗಿದ್ದರೂ, ಇದು ನಮ್ಮ ಗ್ರಹ ಅಂದರೆ ಭೂಮಿಗಿಂತ ಸುಮಾರು 1.9 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಸುರಕ್ಷಿತವಾಗಿ ಹಾದುಹೋಗುತ್ತದೆ ಎಂದು ನಾಸಾ‌‌‌ ಅಂದಾಜಿಸಿದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ ಐದು ಪಟ್ಟು ಹೆಚ್ಚು ದೂರದಲ್ಲಿ ಈ ಕ್ಷುದ್ರಗ್ರಹ ಹಾದುಹೋಗಲಿದೆ.

ಆಸ್ಟರಾಯ್ಡ್ 7482 ಅನ್ನು, ಸಾಮಾನ್ಯವಾಗಿ 1994 PC1 ಎಂದು ಕರೆಯಲಾಗುತ್ತದೆ. ಇದರ ವ್ಯಾಸ 3,280 ಅಡಿಗಳಷ್ಟಿದ್ದು, ದೈತ್ಯಾಕಾರವಾಗಿದ್ದರು ಭೂಮಿಯಿಂದ ದೂರದಲ್ಲಿ ಚಲಿಸುವ ಕಾರಣ ಇದನ್ನು ದೂರದರ್ಶಕದ ಮೂಲಕ ಮಾತ್ರ ನೋಡಬಹುದಾಗಿದೆ. ಈ ಬಾಹ್ಯಾಕಾಶ ಶಿಲೆಯು ಸೂರ್ಯನನ್ನು ಪ್ರತಿ 1.5 ವರ್ಷಗಳಿಗೊಮ್ಮೆ ಸುತ್ತುತ್ತದೆ ಮತ್ತು 2051 ರವರೆಗೆ ಭೂಮಿಯ ಸಮೀಪಕ್ಕೆ ಹಾದುಹೋಗುವುದಿಲ್ಲ ಎಂಬುದು ನಾಸಾದ ಲೆಕ್ಕಾಚಾರ.

ಈ ಹಿಂದೆ ಹಲವು ಆಸ್ಟರಾಯ್ಡ್ ಗಳು ಭೂಮಿಗೆ ತೀರಾ ಹತ್ತಿರದಲ್ಲಿ ಚಲಿಸಿದ್ದರು ಯಾವುದೇ ತೊಂದರೆಯಾಗಿಲ್ಲ. 2051ರವರೆಗು ಆಸ್ಟರಾಯ್ಡ್ ಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಈ ಹಿಂದೆ 1933ರಲ್ಲಿ ಆಸ್ಟರಾಯ್ಡ್ ಒಂದು ಭೂಮಿಗೆ ಹತ್ತಿರವಾದ ಮಾರ್ಗದಲ್ಲಿ ಚಲಿಸಿತ್ತು. ನಮ್ಮ ಗ್ರಹದಿಂದ ಕೇವಲ 1.1ಮಿಲಿಯನ್ ಕಿ.ಮೀ. ದೂರದಲ್ಲಿತ್ತು.‌ ಆದರೂ ಯಾವುದೇ ಅಪಾಯವಾಗಲಿಲ್ಲ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...