ಸ್ವಯಂ ಘೋಷಿತ ಭವಿಷ್ಯ ನುಡಿವಾತ ಟೈಮ್ ಟ್ರಾವಲರ್ ಎಚ್ಚರಿಕೆಯೊಂದನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆತನ ಮಾತುಗಳು ಕುತೂಹಲ ಕೆರಳಿಸಿದೆ.
ಭೂಮಿಯ ಭವಿಷ್ಯವನ್ನು ಬದಲಿಸುವ ಐದು ದುರಂತ ಘಟನೆಗಳ ಎಚ್ಚರಿಕೆಯ ಸರಣಿಯನ್ನು ಆತನ ನೀಡಿದ್ದಾನೆ. ಎನೋ ಅಲಾರಿಕ್ ಎಂದು ಗುರುತಿಸಿಕೊಳ್ಳುವ ವ್ಯಕ್ತಿ ಟಿಕ್ಟಾಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ದೆೈತ್ಯ ಉಲ್ಕೆ ಭೂಮಿಯ ಮೇಲೆ ಅಪ್ಪಳಿಸುವುದರಿಂದ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂವಹನ ನಡೆಸುವುದು ಕೇವಲ ತಿಂಗಳುಗಳ ದೂರದಲ್ಲಿದೆ ಎಂಬ ಭವಿಷ್ಯ ವಿಡಿಯೋದಲ್ಲಿದೆ. ಡಿಸೆಂಬರ್ 8 ರಂದು ಅನ್ಯಗ್ರಹ ಜೀವಿಗಳು ಭೂಮಿಗೆ ಇಳಿಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮುನ್ಸೂಚನೆಯ ಜೊತೆಗೆ, ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯು ಮುಂದಿನ ಆರು ತಿಂಗಳಲ್ಲಿ ಸಂಭವಿಸುವ ನಾಲ್ಕು ಅಸಾಧ್ಯ ಘಟನೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾನೆ. ನಾನು 2671ನೇ ಇಸವಿಯಿಂದ ರಿಯಲ್ ಟೈಮ್ ಟ್ರಾವೆಲರ್ ಆಗಿದ್ದೇನೆ, ಬರಲಿರುವ ಈ ಐದು ದಿನಾಂಕಗಳನ್ನು ನೆನಪಿಸಿಕೊಳ್ಳಿ ಎಂದು ಶೀರ್ಷಿಕೆ ಇದೆ.
ನವೆಂಬರ್ 30ರಂದು ಮೊದಲ ಘಟನೆ ನಡೆಯಲಿದ್ದು, ಭೂಮಿಯ ಪ್ರತಿಬಿಂಬಿತ ಆವೃತ್ತಿಯಂತೆ ಕಾಣುವ ಹೊಸ ಗ್ರಹ ಕಂಡುಬರುತ್ತದೆ, ಡಿಸೆಂಬರ್ನಲ್ಲಿ ವಿದೇಶಿಯರ ಆಕ್ರಮಣ ನಡೆಯುವುದೆಂದು ಹೇಳಿದ್ದಾರೆ.
ಫೆಬ್ರವರಿ 6, 2023 ರಂದು 4 ಹದಿಹರೆಯದವರ ಗುಂಪು ಪ್ರಾಚಿನ ಅವಶೇಷಗಳನ್ನು ಮತ್ತು ಇತರ ಗೆಲಕ್ಸಿಗಳಿಗೆ ವಮ್ರ್ಹೋಲ್ ಅನ್ನು ತೆರೆಯುವ ಸಾಧನವನ್ನು ಕಂಡುಹಿಡಿಯಲಿದೆ, ಬಹುಶಃ ಮುಂದಿನ ವರ್ಷದ ಮಾರ್ಚ್ನಲ್ಲಿ ಮರಿಯಾನಾ ಕಂದಕದಲ್ಲಿ ಪ್ರಾಚಿನ ಜಾತಿಯ ಆವಿಷ್ಕಾರವನ್ನು ಊಹಿಸುತ್ತಾರೆ.
ಕೊನೆಯದು ಯುಎಸ್ ಪಶ್ಚಿಮ ಕರಾವಳಿಯಲ್ಲಿ ಮುಖ್ಯವಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸಿಸುವ ನಿವಾಸಿಗಳಿಗೆ ದುರಂತದ ಸುನಾಮಿ ಎಚ್ಚರಿಕೆಯಾಗಿದೆ. ಈ ಸ್ವಯಂಘೋಷಿತ ಟೈಮ್ ಟ್ರಾವಲರ್ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ.