ಶಿವಮೊಗ್ಗ: ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಕಲ್ಲಿನ ರಥ ಉದ್ಘಾಟನೆ ಕಾರ್ಯಕ್ರಮ ಇಂದು ಬೆಳಗ್ಗೆ ಇಲ್ಲಿನ ಶನೈಶ್ವರ ದೇವಾಲಯದ ಎದುರು ನಡೆಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ದುರ್ಗಿಗುಡಿ ಕನ್ನಡ ಸಂಘ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದು ಸಂತೋಷದ ವಿಚಾರ. ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಯ ಕಲ್ಲಿನ ರಥ ನಿರ್ಮಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ದುರ್ಗಿಗುಡಿ ಕನ್ನಡ ಸಂಘದಲ್ಲಿ ಕೇವಲ ಕನ್ನಡ ಮಾತನಾಡುವವರು ಮಾತ್ರವಿಲ್ಲ. ಎಲ್ಲಾ ಭಾಷೆ ಮಾತನಾಡುವವರು ಇದ್ದಾರೆ. ಇದು ಸಾಮರಸ್ಯದ ವಿಷಯ ಮತ್ತು ಕನ್ನಡ ಭಾಷೆಗೆ ಗೌರವ ತರುವ ವಿಷಯವಾಗಿದೆ. ಹಾಗೂ ಎಲ್ಲಾ ಪಕ್ಷದವರು ಈ ಸಂಘದಲ್ಲಿದ್ದಾರೆ. ಈ ಸಂಘ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹೆಚ್.ಎಂ. ಗಿರೀಶ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯೆ ಮೀನಾಕ್ಷಿ ಗೋವಿಂದರಾಜ್, ಕಾರ್ಯದರ್ಶಿ ಸ.ನ. ಮೂರ್ತಿ, ನರಸಿಂಹ ಗಂಧದಮನೆ, ಕೃಷ್ಣಯ್ಯ, ಟಿ.ವಿ. ರಾಘವೇಂದ್ರ, ಜಿ. ಚಂದ್ರಶೇಖರ್, ಮನೋಜ್ ಕುಮಾರ್, ಗೋವಿಂದರಾಜ್, ಲಿಂಗರಾಜ್, ಸುಧೀರ್, ಹರೀಶ್, ಎಸ್.ಕೆ. ಕೃಷ್ಣಮೂರ್ತಿ ಮೊದಲಾದವರಿದ್ದರು.