ಭೀಮಾ ತೀರದಲ್ಲಿ ಕಳೆದ ಐದು ದಶಕಗಳಿಂದ ನಡೆದುಕೊಂಡು ಬಂದಿದ್ದ ದ್ವೇಷಪೂರಿತ ವಾತಾವರಣಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಅಂತ್ಯ ಹಾಡಿದ್ದಾರೆ. ಬೈರಗೊಂಡ ಹಾಗೂ ಚಡಚಣ ಕುಟುಂಬದ ನಡುವೆ ರಾಜಿ ಸಂಧಾನ ನಡೆಸಿದ್ದು, ಈ ಮೂಲಕ 5 ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ.
ಭೀಮಾ ತೀರದ ಚಡಚಣ ತಾಲೂಕಿನ ಉಮರಾಣಿಯ ಮಹಾದೇವ ಭೈರಗೊಂಡ ಹಾಗೂ ಮಲ್ಲಿಕಾರ್ಜುನ ಚಡಚಣ ಕುಟುಂಬಗಳ ನಡುವೆ ದಶಕಗಳಿಂದ ಪರಸ್ಪರ ದ್ವೇಷವಿದ್ದು, ಇದರಿಂದಾಗಿ ಹತ್ತಾರು ಕೊಲೆಗಳು ನಡೆದಿದ್ದವು. ಈಗ ಎಡಿಜಿಪಿ ಅಲೋಕ್ ಕುಮಾರ್ ಪ್ರಯತ್ನದಿಂದಾಗಿ ಶಾಂತಿ ನೆಲೆಸುವಂತಾಗಿದೆ.
ಬುಧವಾರದಂದು ಚಡಚಣದಲ್ಲಿ ಶಾಂತಿ ಸಭೆ ಕರೆದಿದ್ದ ಎಡಿಜಿಪಿ ಅಲೋಕ್ ಕುಮಾರ್, ಮಹಾದೇವ ಭೈರಗೊಂಡ ಹಾಗೂ ವಿಮಲಾ ಬಾಯಿ ಚಡಚಣ ನಡುವೆ ಸಂಧಾನ ನಡೆಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತಾಕೀತು ಮಾಡಿದರು.