ಕೆನಡಾದ ಟೊರೊಂಟೊ ನಗರದಲ್ಲಿ ಪ್ರಬಲ ಚಂಡಮಾರುತದ ಹಾವಳಿ ಎದುರಾಗಿದ್ದು, ಈ ಸಮಯದಲ್ಲಿ ಕಾರುಗಳ ನಡುವೆ ಟ್ರ್ಯಾಂಪೊಲೈನ್ ಹಾರುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ರಸ್ತೆಯಲ್ಲಿ ಕಾರು ವೇಗವಾಗಿ ಸಾಗುತ್ತಿದ್ದು, ಅದರ ಮೇಲೆಯೇ ಟ್ರ್ಯಾಂಪೊಲೈನ್ ಹಾರಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸುಂಟರಗಾಳಿಯ ಪ್ರಭಾವಕ್ಕೆ ಆ ಪ್ರದೇಶ ತತ್ತರಿಸಿದ್ದು, ಕನಿಷ್ಠ ಇಬ್ಬರು ನಾಗರಿಕರನ್ನು ಬಲಿಪಡೆದಿದೆ. ಕೆನಡಾದ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ
ಒಂಟಾರಿಯೊದ ಅತಿದೊಡ್ಡ ಹೈಡ್ರೊ ಒನ್ ಲಿಮಿಟೆಡ್ ಗೆ ವ್ಯಾಪಕ ಹಾನಿಯಾಗಿದ್ದು, ವಿದ್ಯುತ್ ವ್ಯವಸ್ಥೆ ಮರು ಸ್ಥಾಪಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತೀವ್ರ ಚಂಡಮಾರುತದ ಬಗ್ಗೆ ಮೊಬೈಲ್ ಅಲರ್ಟ್ ನೀಡಿದ್ದು, ಕೆಲವು ಭಾಗಗಳಲ್ಲಿ ಗಂಟೆಗೆ 132 ಕಿಲೋಮೀಟರ್ ವೇಗದಲ್ಲಿ ಗಾಳಿಯ ಬೀಸುತ್ತಿರುವುದನ್ನು ಅಳೆಯಲಾಗಿದೆ.