ಬುದ್ಗಾಮ್: ಭಿಕ್ಷುಕನಂತೆ ಸೋಗು ಹಾಕಿದ ವ್ಯಕ್ತಿಯೊಬ್ಬ ಮನೆಯೊಂದರಿಂದ ನಗದು ಮತ್ತು ಚಿನ್ನಾಭರಣವನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಜಮ್ಮು-ಕಾಶ್ಮೀರದ ಬದ್ಗಾಮ್‌ನಲ್ಲಿ ನಡೆದಿದೆ.
ಬುದ್ಗಾಮ್ ಜಿಲ್ಲೆಯ ಇಚ್ಗಾಮ್ ಗ್ರಾಮದ ಅಬ್ದುಲ್ ರಶೀದ್ ಬಟ್ ಎಂಬುವವರ ಮನೆಗೆ ಭಿಕ್ಷುಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ, ಒಂದು ಕಪ್ ಚಹಾಕ್ಕಾಗಿ ವಿನಂತಿಸಿದ್ದಾನೆ. ಭಿಕ್ಷುಕ ಎಂದು ನಂಬಿದ ಮನೆಯವರು ಆತನಿಗೆ ಚಹಾ ನೀಡಿದ್ದಾರೆ.
ಚಹಾ ಸೇವಿಸುವಾಗ ಆತ ವಿಭಿನ್ನ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾನೆ. ಅಲ್ಲದೆ ಅಸ್ವಸ್ಥರಾಗಿರುವ ರಶೀದ್ ಪುತ್ರಿಯ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾನೆ. ಬಳಿಕ ಆತ ಚಿನ್ನ ಮತ್ತು ಹಣದ ಬಗ್ಗೆ ಕೇಳಲು ಶುರು ಮಾಡಿದ್ದಾನೆ. ನಂತರ ತನ್ನ ಮಾಂತ್ರಿಕ ತಂತ್ರದ ಸಹಾಯದಿಂದ ಮನೆಯಲ್ಲಿದ್ದ ನಗದು ಮತ್ತು ಚಿನ್ನವನ್ನು ಲೂಟಿ ಮಾಡಿದ್ದಾನೆ ಎಂದು ಕುಟುಂಬ ಆರೋಪಿಸಿದೆ.
ಈ ಸಂಬಂಧ ದೂರು ನೀಡಿರುವ ರಶೀದ್ ಕುಟುಂಬಸ್ಥರು, ಕಳ್ಳನನ್ನು ಗುರುತಿಸಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಮತ್ತು ಪೊಲೀಸರ ಸಹಾಯ ಕೋರಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮೇಲಧಿಕಾರಿಗಳು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.