ಒಡಹುಟ್ಟಿದವರ ನಡುವಿನ ಬಾಂಧವ್ಯವು ಬೆಲೆಕಟ್ಟಲಾಗದು. ಅವರು ಸಣ್ಣ ವಿಷಯಗಳಿಗೆ ಜಗಳವಾಡಬಹುದು ಆದರೆ ಅದು ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ಅವರ ನಡುವಿನ ಬಂಧವು ಅವರನ್ನು ಪರಸ್ಪರ ಒಟ್ಟಿಗೆ ಹೋಗುವಂತೆ ಮಾಡುತ್ತದೆ. ಒಬ್ಬರನ್ನೊಬ್ಬರು ನೋಡುವುದಕ್ಕಾಗಿಯೇ ನೂರಾರು ಕಿಲೋಮೀಟರ್ ಪ್ರಯಾಣ ಮಾಡುವಂತೆ ಮಾಡುತ್ತದೆ.
ಇತ್ತೀಚಿನ ವೈರಲ್ ವೀಡಿಯೊದಲ್ಲಿ ಇಬ್ಬರು ಒಡಹುಟ್ಟಿದವರು ಬಹಳ ಸಮಯದ ನಂತರ ಎದುರುಬದರಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡ ವೇಳೆ ಉಂಟಾದ ಭಾವನೆಗಳ ಹರಿವನ್ನು ಕಾಣಬಹುದು.
ಮುಚ್ಚಿದ ಬಾಗಿಲಿನ ಎದುರು ಹುಡುಗಿಯೊಬ್ಬಳು ತಾಳ್ಮೆಯಿಂದ ಕಾಯುವುದರೊಂದಿಗೆ ಹೃದಯಸ್ಪರ್ಶಿ ವೀಡಿಯೊ ಪ್ರಾರಂಭವಾಗುತ್ತದೆ. ಬಳಿಕ ಅವಳ ತಂಗಿ ಬಾಗಿಲು ತೆರೆಯುತ್ತಾಳೆ ಮತ್ತು ಬಿಗಿಯಾಗಿ ತಬ್ಬಿಕೊಳ್ಳುವ ಮೂಲಕ ಅವರಿಬ್ಬರೂ ಭಾವುಕರಾಗುವುದನ್ನು ಕಾಣಬಹುದು.
ನನ್ನ ಸಹೋದರಿಯನ್ನು ಅಚ್ಚರಿಗೊಳಿಸಲು ಮನೆಗೆ ಹೋಗಿದ್ದೆ ಎಂದು ವಿಡಿಯೋ ಹಂಚಿಕೊಂಡಾಕೆ ಶೀರ್ಷಿಕೆ ನೀಡಿದ್ದಾರೆ. ಹಾಗೆಯೇ ಆಕಸ್ಮಿಕವಾಗಿ ಒದಗಿಬಂದ ಅವಕಾಶದ ಬಗ್ಗೆಯೂ ವಿವರಿಸಿದ್ದಾರೆ.
ಇದನ್ನು ಕಂಡ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ. ಕೆಲವರು ತಮ್ಮ ಸಹೋದರ, ಸಹೋದರಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾಗಿ ಕಾಮೆಂಟ್ ಮಾಡಿದ್ದಾರೆ.
ಇದು ನನಗೂ ಅಳುವಂತೆ ಮಾಡಿತು…… ಏಕೆಂದರೆ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಒಬ್ಬರು ಬರೆದುಕೊಂಡಿದ್ದರೆ, ನಾನು ನನ್ನ ಸಹೋದರಿಗಾಗಿ ಕಾಯುತ್ತಿದ್ದೇನೆ ಮತ್ತು ಅವಳಿಂದಲೂ ಅದೇ ಸರ್ಪೈಸ್ ಎಂದು ಹೇಳಿದ್ದಾರೆ. ಈ ರೀಲ್ ಇಲ್ಲಿಯವರೆಗೆ 8.4 ಮಿಲಿಯನ್ ವೀಕ್ಷಣೆಯಾಗಿದೆ.