![](https://kannadadunia.com/wp-content/uploads/2023/06/ad762aff-905e-45ff-8f15-a4ebb4c89f89.jpg)
ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮಾಡಿಸಿರುವ ನಟಿ ಭಾವನಾ ರಾವ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ನಟಿ ಭಾವನಾ ರಾವ್ ಇತ್ತೀಚೆಗೆ ಹಾಟ್ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗಳಿಂದ ಸಾಕಷ್ಟು ಪ್ರತಿಕ್ರಿಗಳು ಬಂದಿವೆ. ತಮ್ಮ ಹಾಟ್ ಲುಕ್ ನಿಂದ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ’ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಾಣ ಆರಂಭಿಸಿದ ಭಾವನಾ ರಾವ್ ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿ ನಿರತರಾಗಿದ್ದಾರೆ.
ಕೊನೆಯದಾಗಿ ‘ತುರ್ತುನಿರ್ಗಮನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಭಾವನಾ ಇತ್ತೀಚೆಗೆ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಅಭಿನಯಿಸಿದ್ದರು.
![](https://kannadadunia.com/wp-content/uploads/2023/06/1aa8e9db-286e-4210-9bce-301b48a68c36.jpg)
![](https://kannadadunia.com/wp-content/uploads/2023/06/6db2d0be-55bc-4e05-96ad-4c9b0a38f41d.jpg)
![](https://kannadadunia.com/wp-content/uploads/2023/06/ffd81608-fda0-4e21-ac28-3eb941734a97.jpg)