
T20 ಸರಣಿ ಟ್ರೋಫಿ ಅನಾವರಣದ ಫೋಟೋ ಶೂಟ್ ವೇಳೆ ಸ್ವಾರಸ್ಯಕರ ಪ್ರಸಂಗವೊಂದು ನಡೆಯಿತು.
ಎರಡು ತಂಡಗಳ ನಾಯಕರಾದ ಕೇನ್ ವಿಲಿಯಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಸಾಂಪ್ರದಾಯಿಕ ಫೋಟೋ ಶೂಟ್‌ಗಾಗಿ ತಯಾರಿ ನಡೆಸುತ್ತಿದ್ದಾಗ, ವಿಡಿಯೋಗ್ರಾಫರ್‌ಗಳು ನಾಟಕೀಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಭಾರೀ ಗಾಳಿ ಬೀಸುತ್ತಿದ್ದಂತೆ ಬಹುತೇಕ ಟ್ರೋಫಿಯು ಹಾರಿಹೋಯಿತು. ತಕ್ಷಣ ಟ್ರೋಫಿಗೆ ಯಾವುದೇ ಹಾನಿಯಾಗುವ ಮೊದಲು ಅದನ್ನು ವಿಲಿಯಮ್ಸನ್ ಕೈಯಲ್ಲಿ ಹಿಡಿದರು. ಸ್ವಲ್ಪ ಸಮಯದ ನಂತರ ಕಿವೀಸ್ ನಾಯಕ ಈ ಘಟನೆಯನ್ನು ನೋಡಿ ನಗಲು ಪ್ರಾರಂಭಿಸಿದರು ಮತ್ತು ಹಾರ್ದಿಕ್ ಕೂಡ ಆಶ್ಚರ್ಯಚಕಿತರಾದರು.
ಶುಕ್ರವಾರದಿಂದ ಶುರುವಾಗುವ ಪಂದ್ಯಾವಳಿಯಲ್ಲಿ ಕಿವೀಸ್ ತಂಡವನ್ನು ಅವರ ಪೂರ್ಣಾವಧಿಯ ನಾಯಕ ವಿಲಮ್ಸನ್ ಮುನ್ನಡೆಸುತ್ತಿದ್ದರೆ, ರೋಹಿತ್ ಶರ್ಮಾ ಅನುಪಸ್ಥಿತಿಯ ಕಾರಣ ಭಾರತ ತಂಡದ ಮ್ಯಾನೇಜ್‌ಮೆಂಟ್ ಹಾರ್ದಿಕ್ ಪಾಂಡ್ಯಗೆ ಉಸ್ತುವಾರಿ ವಹಿಸಿದೆ.