ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆಯೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ. ಇದಕ್ಕೆ ಸಿದ್ಧತೆಗಳು ಕೂಡ ನಡೆದಿದ್ದು, ನಿನ್ನೆಯಷ್ಟೇ ವೇಳಾ ಪಟ್ಟಿ ಪ್ರಕಟವಾಗಿದೆ. ಇದರ ಬೆನ್ನಲ್ಲಿಯೇ ದಕ್ಷಿಣ ಆಫ್ರಿಕಾ ಟೆಸ್ಟ್ ಆಡುವ ತಂಡ ಪ್ರಕಟಿಸಿದೆ.
ಭಾರತದ ವಿರುದ್ಧ ನಡೆಯುವ ಮೂರು ಟೆಸ್ಟ್ ಪಂದ್ಯಗಳಿಗಾಗಿ 21 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ ಇಬ್ಬರು ಹೊಸ ಆಟಗಾರರಿಗೆ ಮಣೆ ಹಾಕಿದೆ. ಡೀನ್ ಎಲ್ಗರ್ ನಾಯಕರಾಗಿ ಆಯ್ಕೆಯಾದರೆ, ತೆಂಬಾ ಬವುಮಾ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಬೌಲರ್ ಸಿಸಂಡಾ ಮಗಾಲಾ ಹಾಗೂ ಎರಡನೇ ವಿಕೆಟ್ ಕೀಪರ್ ಆಗಿ ರಿಯಾನ್ ರಿಕಲ್ಟನ್ ಹೊಸದಾಗಿ ತಂಡ ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಡೀನ್ ಎಲ್ಗರ್ (ನಾಯಕ), ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕಗಿಸೊ ರಬಾಡ, ಸರೆಲ್ ಎರ್ವೀ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಅನ್ರಿಕ್ ನೋಕಿಯಾ, ಕೀಗನ್ ಪೀಟರ್ಸನ್, ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟೌರ್ಮನ್, ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್, ಡುವಾನ್ನೆ ಒಲಿವಿಯರ್ ಆಯ್ಕೆಯಾಗಿದ್ದಾರೆ.