
ಸಾಮಾಜಿಕ ಮಾಧ್ಯಮಗಳಲ್ಲಿ ಈ ಏರುತ್ತಿರುವ ಬೆಲೆಗಳ ಮೀಮ್ಗಳು ಮತ್ತು ಜೋಕ್ಗಳಿಂದ ತುಂಬಿ ಹೋಗಿದೆ. ಇದೀಗ ತರಕಾರಿ ಮಾರಾಟಗಾರನೊಬ್ಬ ಹಣದುಬ್ಬರದ ಬಗ್ಗೆ ಹೇಳಲು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾನೆ.
ಗುರ್ವಿಂದರ್ ಎಂಬ ಹೆಸರಿನ ಈ ತರಕಾರಿ ಮಾರಾಟಗಾರ ತರಕಾರಿಗಳ ಬೆಲೆ ಏರಿಕೆಯ ಬಗ್ಗೆ ಕವಿತೆ ರಚಿಸಿದ್ದಾರೆ. ಅವರು ತಮ್ಮ ಕವಿತೆ ವಾಚನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಶಬ್ನಮ್ ಹಶ್ಮಿ ಎಂಬ ಬಳಕೆದಾರರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಗುರ್ವಿಂದರ್ ಪಂಜಾಬಿ ಭಾಷೆಯಲ್ಲಿ ಕವಿತೆ ರಚಿಸಿ ಮಾರ್ಮಿಕವಾಗಿ ಹಾಡಿದ್ದಾರೆ. ಕವಿತೆಯ ಸಾರಾಂಶ ಹೀಗಿದೆ…… ನಿಂಬೆ ಹೇಳುತ್ತದೆ, ನೀವು ನನ್ನನ್ನು ಮುಟ್ಟುವುದಿಲ್ಲ. ಮೆಣಸಿನಕಾಯಿ ಹೇಳುತ್ತಾನೆ ನೀನು ನನ್ನನ್ನು ಬಹಳ ದಿನಗಳಿಂದ ತಿಂದಿಲ್ಲ. ನೀವು ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿದ್ದೀರಿ ಅಂತಾ ತೈಲ ಹೇಳುತ್ತದೆ. ಜನಸಾಮಾನ್ಯರು ಅನ್ನವಿಲ್ಲದೆ ಸಾಯುತ್ತಿದ್ದಾರೆ. ಹಣದುಬ್ಬರದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಭಾರತವು ವಿಶ್ವಾದ್ಯಂತ ಮೆಚ್ಚುಗೆಯನ್ನು ಪಡೆಯುತ್ತಿದೆ ಅಂತಾ ನಾವು ಹೇಳುತ್ತಿದ್ದೇವೆ. ಆದರೆ, ಭಾರತವು ಎರಡನೇ ಶ್ರೀಲಂಕಾ ಆಗಲಿದೆ ಎಂದು ಭಾವಿಸುವುದಾಗಿ ಅವರು ಹಾಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅವರ ವಿಶಿಷ್ಟ ಹಾಡಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತವು ಎರಡನೇ ಶ್ರೀಲಂಕಾ ಆಗುತ್ತಿದೆ ಎಂದು ತೋರುತ್ತಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.