![](https://kannadadunia.com/wp-content/uploads/2022/01/25410351ed45850fae.jpg)
ಇದಕ್ಕೆ ಉದಾಹರಣೆ ಎನ್ನುವಂತೆ ಶ್ರೀನಗರದಲ್ಲಿ ಬೀಡು ಬಿಟ್ಟಿರುವ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ವಿಭಾಗ ಹಿಮಪಾತದ ನಡುವೆಯೂ ಗರ್ಭಿಣಿ ಮಹಿಳೆಯೊಬ್ಬರನ್ನ ಆಕೆಯ ಮನೆಯಿಂದ ಆಸ್ಪತ್ರೆವರೆಗೆ ಕರೆದುಕೊಂಡು ಹೋಗಿದೆ.
ಗರ್ಭಿಣಿ ಮಹಿಳೆಯ ತುರ್ತು ವೈದ್ಯಕೀಯ ನೆರವು ಕೋರಿ ಎಲ್‌ಒಸಿ ಸಮೀಪದ ಬೋನಿಯಾರ್‌ನಲ್ಲಿರುವ ಘಗರ್ ಹಿಲ್ ಗ್ರಾಮದಿಂದ ಚಿನಾರ್ ಕಾರ್ಪ್ಸ್ ಗೆ ಕರೆ ಬಂದಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳಾಂತರಿಸುವ ತಂಡವು, ಭಾರೀ ಹಿಮಪಾತದಲ್ಲೂ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ 6.5 ಕಿ.ಮೀ.ವರೆಗೆ ಎತ್ತೊಯ್ದಿದ್ದಾರೆ. ಘಗರ್ ಹಿಲ್ ನಿಂದ ಸಲಾಸನ್‌ನವರೆಗೆ ಹೊತ್ತೊಯ್ದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಈ ಬಗ್ಗೆ ಚಿನಾರ್ ಕಾರ್ಪ್ಸ್, ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಸೈನಿಕರು ಮಹಿಳೆಯನ್ನ ಹೊತ್ತೊಯ್ದ ವಿಡಿಯೋ ಹಂಚಿಕೊಂಡು ಘಟನೆಯನ್ನ ಸಂಪೂರ್ಣವಾಗಿ ವಿವರಿಸಿದೆ. ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ.