ಶಿವಮೊಗ್ಗ: ತಮಿಳು ಸಮಾಜಗಳ ಒಕ್ಕೂಟದ ಸಹಯೋಗದೊಂದಿಗೆ ಸೆ. 3 ರಂದು ಸಂಜೆ 4 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಮಲೇಷ್ಯಾದ ಮೇಗಾ ಎಂಟರ್ ಟೈನರ್ ಅವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಮಿಳು ಸಮಾಜದ ಮುಖಂಡ ಎಂ. ಭೂಪಾಲ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಸೌಹಾರ್ದಯುತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಸುಮಾರು 22 ಮಲೇಷ್ಯಾ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಎಂ.ಜಿ.ಆರ್. ಅವರ ನಕಲು ಹಾಡು ಮತ್ತು ನೃತ್ಯ, ಮಿಮಿಕ್ರಿ, ಭಕ್ತಿಗೀತೆಗಳನ್ನು ತಮಿಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಹಾಡಲಿದ್ದಾರೆ. ಇದೊಂದು ರಾಜಕೀಯೇತರ ಕಾರ್ಯಕ್ರಮವಾಗಿದೆ ಎಂದರು.
ಅಖಿಲ ಕರ್ನಾಟಕ ತಮಿಳು ಸಮಾಜ ಸೇವಾ ಸಂಘದ ಮುಖಂಡ ಅರುಣಗಿರಿ ಮಾತನಾಡಿ, ‘ಕಲೈನಿಗಳ್ಚಿ’ ಎಂಬ ಹೆಸರಿನ ಅಡಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್. ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಎಂ. ಶ್ರೀಕಾಂತ್, ಬಿ. ಶಿವಕುಮಾರ್, ಕಾಂತೇಶ್ ಹಾಗೂ ತಮಿಳು ಹಾಸ್ಯ ನಟ ಸೆಂಥಿಲ್, ಎಂ.ಜಿ.ಆರ್. ಮಣಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎ. ಚೆಲುವರಾಜ್, ಬೇಲೂರು ರವಿಚಂದ್ರನ್, ಮುರುಗನ್, ಭಾರತ್, ವಿ. ಮಂಜುನಾಥ್, ರಾಜೇಂದ್ರನ್, ದೊರೈ ಮೊದಲಾದವರಿದ್ದರು.