
ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ದೀರ್ಘ-ಶ್ರೇಣಿಯ ನಿಖರವಾದ ಸ್ಟ್ರೈಕ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ನಿಗದಿಪಡಿಸಲಾದ ಗುರಿಯ ನಾಶ ಹಾಗೂ ಫ್ರಂಟ್ಲೈನ್ ವೇದಿಕೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಪ್ರದರ್ಶಿಸಿದೆ ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಲಾಗಿದೆ.
ಈ ಯಶಸ್ವಿ ಪರೀಕ್ಷೆಯು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಭಾರತೀಯ ನೌಕಾಪಡೆಯು ಹೇಳಿದೆ. ಇದು ಆತ್ಮ ನಿರ್ಭರ್ ಭಾರತ್ ಹಾಗೂ ಮೇಕ್ ಇನ್ ಇಂಡಿಯಾಗೆ ಭಾರತೀಯ ನೌಕಾಪಡೆಯ ಮಹತ್ವದ ಕೊಡುಗೆಯಾಗಿದೆ.