‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬ ಮಾತಿದೆ. ಇದಕ್ಕೆ ಅನ್ವಯವಾಗುವಂತೆ ಭಾರತೀಯರ ಶಾಪಿಂಗ್ ಕುರಿತು ನಡೆದ ಸಮೀಕ್ಷೆ ಒಂದರಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಹೌದು, ಭಾರತದ ಶೇಕಡ 50 ಕ್ಕಿಂತ ಅಧಿಕ ಮಂದಿ ಶಾಪಿಂಗ್ ಮಾಡಿದ ಸಂದರ್ಭದಲ್ಲಿ ತಕ್ಷಣವೇ ಹಣ ಪಾವತಿ ಮಾಡುವ ಬದಲು ಸಾಲದ ಸೌಲಭ್ಯವನ್ನು ಬಳಸಿಕೊಳ್ಳಲು ಮುಂದಾಗುತ್ತಾರೆ ಎಂಬ ಸಂಗತಿ ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಹೋಂ ಕ್ರೆಡಿಟ್ ಇಂಡಿಯಾದ ವಾರ್ಷಿಕ ಗ್ರಾಹಕ ಅಧ್ಯಯನ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಶಾಪಿಂಗ್ ಮಾಡಿದ ವೇಳೆ ಇಎಂಐ ಸೌಲಭ್ಯ ಅಥವಾ ಯಾವುದೇ ಕ್ರೆಡಿಟ್ ಕಾರ್ಡ್ ಬಳಸಲು ಗ್ರಾಹಕರು ಬಯಸುತ್ತಾರೆ ಎನ್ನಲಾಗಿದೆ. ಮತ್ತೊಂದು ಇಂಟ್ರಸ್ಟಿಂಗ್ ಸಂಗತಿ ಎಂದರೆ ಶೇಕಡ 60 ಕ್ಕಿಂತ ಅಧಿಕ ಮಂದಿ ಇಂಟರ್ನೆಟ್ ಬ್ಯಾಂಕಿಂಗ್ ಗಿಂತ ಮೊಬೈಲ್ ಬ್ಯಾಂಕಿಂಗ್ ಮೂಲಕ ಸಾಲ ಪಡೆಯಲು ಒತ್ತು ನೀಡಿರುವುದು ತಿಳಿದು ಬಂದಿದೆ.
ಬೆಂಗಳೂರು, ಮುಂಬೈ, ನವದೆಹಲಿ ಸೇರಿದಂತೆ ದೇಶದ 16 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಶೇಕಡಾ 75ಕ್ಕೂ ಅಧಿಕ ಮಂದಿ ಸಾಲ ಪಡೆಯುವ ಕುರಿತು ಆರಾಮದಾಯಕವಾಗಿರುವುದು ತಿಳಿದು ಬಂದಿದೆ.