ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಇರುವ ವ್ಯಾಮೋಹ ಎಲ್ಲರಿಗೂ ಗೊತ್ತಿರುವ ಸಂಗತಿ. ಹಬ್ಬ ಹರಿದಿನ, ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವ ಭಾರತೀಯರು ಇದನ್ನು ಆಪತ್ಕಾಲದ ನಿಧಿಯಾಗಿಯೂ ಬಳಸುತ್ತಾರೆ.
ಹೀಗಾಗಿ ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಧಿಕ ಪ್ರಮಾಣದ ಚಿನ್ನ ಇರುವುದು ಜನಜನಿತ. ಇದರ ಮಧ್ಯೆ ಇದೀಗ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಬಹಿರಂಗವಾಗಿದೆ. ಹೌದು, ಭಾರತೀಯರ ಬಳಿ ವಿಶ್ವ ಬ್ಯಾಂಕ್ ಮೀಸಲು ಪ್ರಮಾಣದ ಸಂಗ್ರಹಕ್ಕೂ ಅಧಿಕ ಚಿನ್ನ ಇದೆ ಎಂಬ ಸಂಗತಿ ಈಗ ಬಹಿರಂಗವಾಗಿದೆ.
ಎರಡು ವರ್ಷಗಳ ಹಿಂದೆ ನಡೆಸಿದ ಅಧ್ಯಯನದ ಸಂದರ್ಭದಲ್ಲಿ ಭಾರತೀಯರು ತಮ್ಮ ಮನೆಗಳಲ್ಲಿ ಒಟ್ಟಾರೆ 21,000 ದಿಂದ 23,000 ಟನ್ ಚಿನ್ನವನ್ನು ಹೊಂದಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದ್ದು, ಇದೀಗ ಈ ಪ್ರಮಾಣ 24,000 ದಿಂದ 25,000 ಟನ್ ತಲುಪಿದೆ ಎನ್ನಲಾಗಿದೆ. ಇದು ವಿಶ್ವ ಬ್ಯಾಂಕ್ ಮೀಸಲು ಪ್ರಮಾಣದ ಸಂಗ್ರಹಕ್ಕಿಂತ ಅಧಿಕವಂತೆ.