alex Certify ಭಾರತೀಯರ ʼಇಂಟರ್ನೆಟ್‌ʼ ಬಳಕೆ ಕುರಿತಂತೆ ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯರ ʼಇಂಟರ್ನೆಟ್‌ʼ ಬಳಕೆ ಕುರಿತಂತೆ ಕುತೂಹಲಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿ ಇಂಟರ್ನೆಟ್ ಬಳಕೆ ವೇಗವಾಗಿ ಹೆಚ್ಚುತ್ತಿದೆ. ದೇಶದ ನಗರಗಳಿಗಿಂತ ಹೆಚ್ಚು ಹಳ್ಳಿಗಳಲ್ಲಿ ಇಂಟರ್ನೆಟ್ ಬಳಸಲಾಗುತ್ತಿದೆ. ಇಷ್ಟೇ ಅಲ್ಲ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಸಕ್ರಿಯ ಇಂಟರ್ನೆಟ್ ಬಳಕೆದಾರರಾಗಿದ್ದಾರೆ.

2025ರ ವೇಳೆಗೆ ಭಾರತದಲ್ಲಿ ಗರಿಷ್ಠ ಇಂಟರ್ನೆಟ್ ಬೆಳವಣಿಗೆಯಾಗಲಿದೆ ಎಂಬುದು ವರದಿಯೊಂದರಲ್ಲಿ ಬಹಿರಂಗವಾಗಿದೆ.  52 ಪ್ರತಿಶತ ಭಾರತೀಯರು ಅಂದರೆ ಸುಮಾರು 76 ಕೋಟಿ ಜನರು ಪ್ರಸ್ತುತ ಇಂಟರ್ನೆಟ್ ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ.

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ಅಂದಾಜಿನ ಪ್ರಕಾರ, 2025ರ ವೇಳೆಗೆ 900 ಮಿಲಿಯನ್ ಭಾರತೀಯರು ಇಂಟರ್ನೆಟ್ ಅನ್ನು ಸಕ್ರಿಯವಾಗಿ ಬಳಸುತ್ತಾರೆ. ಸಕ್ರಿಯ ಬಳಕೆದಾರರು ಎಂದರೆ ತಿಂಗಳಿಗೆ ಒಮ್ಮೆಯಾದರೂ ಇಂಟರ್ನೆಟ್ ಬಳಸುವವರು ಎಂದರ್ಥ. ಭಾರತದಲ್ಲಿ ಇಂತಹ ಬೆಳವಣಿಗೆ ಕಾಣುತ್ತಿರುವುದು ಇದೇ ಮೊದಲು.ಈ ಅಂಕಿ-ಅಂಶಗಳನ್ನು ‘ಇಂಟರ್ನೆಟ್ ಇನ್ ಇಂಡಿಯಾ ವರದಿ 2022’ ರಲ್ಲಿ ಬಿಡುಗಡೆ ಮಾಡಲಾಗಿದೆ. ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾದ (IAMAI) ವರದಿ ಇದು.

76 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ 40 ಕೋಟಿ ಗ್ರಾಮೀಣ ಭಾಗದ ಜನರಿದ್ದಾರೆ, 36 ಕೋಟಿ ಜನರು ನಗರವಾಸಿಗಳು. ಅಂದರೆ ನಗರಗಳಿಗಿಂತ ಹಳ್ಳಿಗಳಲ್ಲಿ ಅಂತರ್ಜಾಲದ ಬಳಕೆ ಹೆಚ್ಚು. ಕಳೆದ ಒಂದು ವರ್ಷದಲ್ಲಿ ಭಾರತದ ನಗರಗಳಲ್ಲಿ ಇಂಟರ್ನೆಟ್ ಬಳಕೆ ಶೇ.6ರಷ್ಟು ಹೆಚ್ಚಿದ್ದರೆ ಹಳ್ಳಿಗಳಲ್ಲಿ ಈ ಬೆಳವಣಿಗೆ 14 ಪ್ರತಿಶತ ಆಗಿದೆ. 2025ರ ವೇಳೆಗೆ 56 ಪ್ರತಿಶತ ಹೊಸ ಇಂಟರ್ನೆಟ್ ಬಳಕೆದಾರರು ಹಳ್ಳಿಗಳಿಂದ ಬರುತ್ತಾರೆ.

ಗೋವಾದಲ್ಲಿ ಅತಿ ಹೆಚ್ಚು ಅಂದರೆ ಶೇ.70 ರಷ್ಟು ಮತ್ತು ಬಿಹಾರದಲ್ಲಿ ಕಡಿಮೆ ಅಂದರೆ ಶೇ.32ರಷ್ಟು ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ಒಟ್ಟು ಭಾರತೀಯರಲ್ಲಿ ಶೇ.54ರಷ್ಟು ಇಂಟರ್ನೆಟ್ ಬಳಕೆದಾರರು ಪುರುಷರು. ಆದರೆ ಹೊಸದಾಗಿ ಸೇರ್ಪಡೆಗೊಳ್ಳುವ ಬಳಕೆದಾರರಲ್ಲಿ 57 ಪ್ರತಿಶತದಷ್ಟು ಮಹಿಳೆಯರು ಇರಲಿದ್ದಾರೆ. 2025ರ ಹೊತ್ತಿಗೆ ಹೊಸ ಬಳಕೆದಾರರಲ್ಲಿ ಶೇ.65ರಷ್ಟು ಮಹಿಳೆಯರೇ ಇರಲಿದ್ದಾರೆ ಎನ್ನಲಾಗ್ತಿದೆ.

ಮೊಬೈಲ್‌ಗಳ ಜೊತೆಗೆ, ಟ್ಯಾಬ್ಲೆಟ್‌ಗಳು ಅಥವಾ ಸ್ಮಾರ್ಟ್ ಟಿವಿಗಳಂತಹ ಸ್ಟ್ರೀಮಿಂಗ್ ಸಾಧನಗಳಲ್ಲಿ ಇಂಟರ್ನೆಟ್ ಬಳಸುವ ಜನರ ಸಂಖ್ಯೆಯು ಶೇ.13ಕ್ಕೆ ಏರಿದೆ. ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಡಿಜಿಟಲ್‌ ಪಾವತಿ ಬಳಕೆಯಲ್ಲಿ ಶೇ.13 ರಷ್ಟು ಹೆಚ್ಚಳವಾಗಿದೆ. ಸುಮಾರು 34 ಕೋಟಿ ಜನರು ಡಿಜಿಟಲ್ ಪಾವತಿಯನ್ನು ಬಳಸುತ್ತಿದ್ದಾರೆ. ಅವರ ಪೈಕಿ 36 ಪ್ರತಿಶತದಷ್ಟು ಬಳಕೆದಾರರು ಹಳ್ಳಿಗಳಿಂದ ಬಂದವರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...