ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಸೀಲಿಂಗ್ ಫ್ಯಾನ್ ಅಳವಡಿಸಿರುತ್ತಾರೆ. ಭಾರತದಲ್ಲಿ ಸೀಲಿಂಗ್ ಫ್ಯಾನ್‌ಗಳಿಗೆ ಮೂರು ಬ್ಲೇಡ್‌ಗಳು ಅಥವಾ ರೆಕ್ಕೆಗಳಿರುತ್ತವೆ. ಕೇವಲ ಮೂರು ರೆಕ್ಕೆಗಳೇಕೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು.
ಭಾರತ ಹೊರತುಪಡಿಸಿ ವಿವಿಧ ದೇಶಗಳಲ್ಲಿ ನಾಲ್ಕು ರೆಕ್ಕೆಗಳಿರುವ ಸೀಲಿಂಗ್ ಪ್ಯಾನ್‌ಗಳನ್ನು ಬಳಸುತ್ತಾರೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣವಿದೆ.
ಫ್ಯಾನ್‌ನ ರೆಕ್ಕೆಗಳು ಆಯಾ ದೇಶದ ವಾತಾವರಣವನ್ನು ಅವಲಂಬಿಸಿರುತ್ತವೆ. ಈ ರೆಕ್ಕೆಗಳನ್ನು ಮೋಟರ್‌ನಲ್ಲಿ ಲೋಡ್ ಮಾಡಲಾಗುತ್ತದೆ. ಆದ್ದರಿಂದ ಕಡಿಮೆ ತಾಪಮಾನವಿರುವ ದೇಶಗಳಲ್ಲಿ ಫ್ಯಾನ್ ರೆಕ್ಕೆಗಳ ಸಂಖ್ಯೆ ಹೆಚ್ಚು. ಕಡಿಮೆ ಬ್ಲೇಡ್‌ಗಳನ್ನು ಹೊಂದಿರುವ ಫ್ಯಾನ್‌ಗಳಿಂದ ಹೆಚ್ಚು ಗಾಳಿ ಬರುತ್ತದೆ. ಹಾಗಾಗಿ ಭಾರತದಂತಹ ದೇಶಗಳಲ್ಲಿ ಸೆಖೆ ಇರುವುದರಿಂದ ಮೂರು ಬ್ಲೇಡ್‌ಗಳನ್ನು ಹೊಂದಿರುವ ಫ್ಯಾನ್‌ಗಳನ್ನು ಬಳಸಲಾಗುತ್ತದೆ. ಬ್ಲೇಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಫ್ಯಾನ್ ವೇಗವಾಗಿ ಚಲಿಸುತ್ತದೆ.
ಅಮೆರಿಕದಂತಹ ಶೀತ ಹವಾಮಾನದ ದೇಶಗಳಲ್ಲಿ, 4 ರೆಕ್ಕೆಗಳ ಫ್ಯಾನ್‌ಗಳು ಬಳಕೆಯಲ್ಲಿವೆ. 4 ಬ್ಲೇಡ್‌ಗಳಿರೋ ಫ್ಯಾನ್‌ಗಳ ವೇಗ ಕಡಿಮೆಯಿರುತ್ತದೆ. ಗಾಳಿ ಕೂಡ ಹೆಚ್ಚು ಬರುವುದಿಲ್ಲ. ಶೀತ ಹವಾಮಾನದ ದೇಶಗಳಲ್ಲಿ ಬಲವಾದ ಗಾಳಿಯ ಅಗತ್ಯವಿಲ್ಲ. ಆದ್ದರಿಂದ 4 ರೆಕ್ಕೆಗಳ ಫ್ಯಾನ್‌ಗಳನ್ನು ಬಳಸಲಾಗುತ್ತದೆ. ಫ್ಯಾನ್‌ನಲ್ಲಿನ ಬ್ಲೇಡ್‌ಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ, ಮೋಟಾರ್‌ಗೆ ಒತ್ತಡ ಹೆಚ್ಚುತ್ತದೆ. ಈ ಕಾರಣದಿಂದಾಗಿ ಫ್ಯಾನ್ ನಿಧಾನವಾಗಿ ಬೀಸುತ್ತದೆ.