alex Certify ಭಾರತದ ರಸ್ತೆಗಳಲ್ಲಿ ʼಮೋಟೋ ಮೋರಿನಿʼ ಹವಾ ಶುರು, ಲಾಂಚ್‌ ಆಗಿವೆ ಸೂಪರ್‌ ಬೈಕ್‌ಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ರಸ್ತೆಗಳಲ್ಲಿ ʼಮೋಟೋ ಮೋರಿನಿʼ ಹವಾ ಶುರು, ಲಾಂಚ್‌ ಆಗಿವೆ ಸೂಪರ್‌ ಬೈಕ್‌ಗಳು…!

ಚೀನಾ-ಮಾಲೀಕತ್ವದ ಇಟಾಲಿಯನ್ ಮೋಟಾರ್‌ ಸೈಕಲ್ ತಯಾರಕ ಕಂಪನಿ Moto Morini ಅಂತಿಮವಾಗಿ X-Cape 650 adv-tourer ಮತ್ತು Seiemmezzo neo-retro naked ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದೆ. ಬೆಲೆಗಳು 6.8 ಲಕ್ಷದಿಂದ 7.5 ಲಕ್ಷ ರೂಪಾಯಿವರೆಗೂ ಇವೆ. ಎರಡೂ ಮೋಟಾರ್‌ಸೈಕಲ್‌ಗಳು ತಲಾ ಮೂರು ಬಣ್ಣದಲ್ಲಿ, ಎರಡು ರೂಪಾಂತರಗಳಲ್ಲಿ ಲಭ್ಯವಿವೆ.

ಮೋಟೋ ಮೊರಿನಿ ಎಕ್ಸ್-ಕೇಪ್ 650…

ಎಕ್ಸ್-ಕೇಪ್ 650 ಭಾರತೀಯ ಮಾರುಕಟ್ಟೆಗೆ ಮೋಟೋ ಮೊರಿನಿಯ ಪ್ರಮುಖ ಕೊಡುಗೆ. ಇದೊಂದು ಸಾಹಸ ಪ್ರಿಯ, ಪ್ರವಾಸಿ ಬೈಕ್‌. ಇದರಲಿ  ಇದು ಎಕ್ಸ್-ಕೇಪ್ 650X ಎಂಬ ಮಾಡೆಲ್‌ ಸಹ ಇದೆ. ಆಫ್-ರೋಡ್ ಕೇಂದ್ರೀಕರಿಸಿ ಈ ಬೈಕ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. Moto Morini X-Cape 650 ಟ್ವಿನ್‌ಗಳು ಎತ್ತರದ ವಿಂಡ್‌ಸ್ಕ್ರೀನ್ ಹೊಂದಿವೆ. ಅವಳಿ ಹೆಡ್‌ಲೈಟ್ ಸೆಟಪ್ ಸಹ ಇದರಲ್ಲಿದೆ.

ಮೋಟೋ ಮೊರಿನಿ ಎಕ್ಸ್-ಕೇಪ್ 650 ಮೋಟಾರ್‌ಸೈಕಲ್‌ಗಳ ಬೆಲೆ…

X-Cape 650

ಸ್ಮೋಕಿ ಆಂಥ್ರಾಸೈಟ್ – 7.20 ಲಕ್ಷ ರೂ.

ಕರಾರ ವೈಟ್ – 7.30 ಲಕ್ಷ ರೂ.

ರೆಡ್ ಪ್ಯಾಶನ್ – 7.30 ಲಕ್ಷ ರೂ.

X-Cape 650X…

ಸ್ಮೋಕಿ ಆಂಥ್ರಾಸೈಟ್ – 7.40 ಲಕ್ಷ ರೂ.

ಕರಾರ ವೈಟ್ – 7.50 ಲಕ್ಷ ರೂ.

ರೆಡ್ ಪ್ಯಾಶನ್ – 7.50 ಲಕ್ಷ ರೂ.

Moto Morini Seiemmezzo 6½…

Seiemmezzo ಭಾರತದಲ್ಲಿ ಮೋಟೋ ಮೊರಿನಿಯ ಅತ್ಯಂತ ಕೈಗೆಟುಕುವ ದರದಲ್ಲಿ ಸಿಗ್ತಾ ಇರೋ ಬೈಕ್‌. ಇದು ನಿಯೋ-ರೆಟ್ರೊ ಶೈಲಿಯಲ್ಲಿದೆ. ಇದನ್ನು ಸ್ಟ್ಯಾಂಡರ್ಡ್ ‘ರೆಟ್ರೋ ಸ್ಟ್ರೀಟ್’ ಅಥವಾ ಹೆಚ್ಚು ಆಫ್-ರೋಡ್ ಫೋಕಸ್‌ ಆಗಿಯೇ ಅಭಿವೃದ್ಧಿಪಡಿಸಲಾಗಿದೆ. ಎರಡೂ ಬೈಕುಗಳು ಒಂದು ಸುತ್ತಿನ DRL ಜೊತೆಗೆ ವೃತ್ತಾಕಾರದ LED ಹೆಡ್‌ಲೈಟ್ ಅನ್ನು ಹೊಂದಿವೆ.

Seiemmezzo 6½ Retro Street…

ಮ್ಯಾಟ್ ಗ್ರೇ – 6.89 ಲಕ್ಷ ರೂ.

Mstelize White – 6.99 ಲಕ್ಷ ರೂ.

ಮಿಲಾನೊ ರೆಡ್ – 6.99 ಲಕ್ಷ ರೂ.

Seiemmezzo 6½ ರೆಟ್ರೋ ಸ್ಕ್ರ್ಯಾಂಬ್ಲರ್

ಇಂಡಿಗೊ ಬ್ಲೂ – 6.99 ಲಕ್ಷ ರೂ.

ಮ್ಯಾಟ್ ಗ್ರೀನ್ – 7.10 ಲಕ್ಷ ರೂ.

ಗ್ರ್ಯಾಫೈಟ್ ಬ್ಲಾಕ್ – 7.10 ಲಕ್ಷ ರೂ.

ಈ ಎಲ್ಲಾ ಮೋಟಾರ್‌ ಸೈಕಲ್‌ಗಳಿಗೆ ಸಿಕ್ಕಿರುವ ಗ್ರಾಹಕರ ರೆಸ್ಪಾನ್ಸ್‌ ಮೋಟೋ ಮೋರಿನಿಗೆ ಸಖತ್‌ ಖುಷಿ ಕೊಟ್ಟಿದೆಯಂತೆ. ಇದು ಉತ್ತಮ ಗುಣಮಟ್ಟ ಮತ್ತು ವಿಶಿಷ್ಟ ಸವಾರಿ ಅನುಭವವನ್ನು ಉತ್ತೇಜಿಸುತ್ತದೆ ಅಂತಾ ಕಂಪನಿ ಭರವಸೆ ನೀಡಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...