ಬ್ರಿಟಿಷ್ ಮೋಟರ್ ಸೈಕಲ್ ಕಂಪನಿಯಾಗಿರುವ ಟ್ರಯೆಂಪ್ `ಟೈಗರ್ 1200’ ಎಂಬ ಹೆಸರಿನ ಅಡ್ವೆಂಚರ್ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಬೆಲೆ 19.19 ಲಕ್ಷ ರೂಪಾಯಿ(ಎಕ್ಸ್ ಶೋರೂಂ) ಮತ್ತು ಟಾಪ್ ವೇರಿಯೆಂಟ್ ಬೆಲೆ 21.69 ಲಕ್ಷ ರೂಪಾಯಿಗಳಾಗಿದೆ(ಎಕ್ಸ್ ಶೋರೂಂ).
ಈ ಹೊಸ ಟ್ರಯೆಂಪ್ ಟೈಗರ್ 1200 ಯನ್ನು 2021 ರ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಜಿಟಿ ಪ್ರೊ, ರ್ಯಾಲಿ ಪ್ರೊ, ಜಿಟಿ ಎಕ್ಸ್ ಪ್ಲೋರರ್ ಮತ್ತು ರ್ಯಾಲಿ ಎಕ್ಸ್ ಪ್ಲೋರರ್ ಎಂಬ ನಾಲ್ಕು ಶ್ರೇಣಿಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಈ ಬೈಕ್ ಲಭ್ಯವಿದೆ. ಈ ಹೊಸ ಬೈಕ್ ಬಿಎಂಡಬ್ಲ್ಯೂ ಆರ್ 1250 ಜಿಎಸ್, ಹ್ಯಾರ್ಲೆ ಡೇವಿಡ್ಸನ್ ಪಾನ್ ಅಮೆರಿಕಾ ಮತ್ತು ಡುಕಾಟಿ ಮಲ್ಟಿಸ್ಟ್ರಾಡಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಭಾವಿಸಲಾಗಿದೆ.
ಈ ಹೊಸ ಟೈಗರ್ 1200 ಎಡಿವಿಯನ್ನು ಎರಡು ವರ್ಗಗಳನ್ನಾಗಿ ಮಾಡಲಾಗಿದೆ. ಅದರಲ್ಲಿ ಜಿಟಿ ದೂರದ ಪ್ರಯಾಣಕ್ಕೆ ಸೂಕ್ತವಾದ ರೀತಿಯಲ್ಲಿ ತಯಾರಿಸಲಾದ ಬೈಕ್ ಮತ್ತು ರ್ಯಾಲಿ ಹೆಸರಿನ ಬೈಕನ್ನು ಆಫ್ ರೋಡ್ ಪರಿಸ್ಥಿತಿಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ.