
ಈ ಮರದ ಪೆಟ್ಟಿಗೆಗಳನ್ನು ಭಾರತದ ಭೂಪ್ರದೇಶದ ಒಳಗೆ ಡ್ರೋನ್ಗಳ ಸಹಾಯದಿಂದ ಇರಿಸಲಾಗಿದೆ. ಬಿಎಸ್ಎಫ್ನ ಪಂಜಗರಾಯ್ ಬಾರ್ಡರ್ ಔಟ್ಪೋಸ್ಟ್ ಬಳಿ ಮಾನವರಹಿತ ಫ್ಲೈಯಿಂಗ್ ವಾಹನಗಳ ಚಲನೆಯನ್ನು ಯೋಧರು ಗುರುತಿಸಿದ್ದಾರೆ ಎಂದು ಬಿಎಸ್ಎಫ್ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಪ್ರಭಾಕರ ಜೋಷಿ ಹೇಳಿದರು.
ಮಧ್ಯಾಹ್ನ 12:50ರ ಸುಮಾರಿಗೆ ಎರಡು ಬಾರಿ ಡ್ರೋನ್ ಚಲನೆಯನ್ನು ನೋಡಲಾಯಿತು. ಇದಾದ ನಂತರ ಪಾಕಿಸ್ತಾನದ ಕಡೆಗೆ ಹಿಂತಿರುಗಿದ ಡ್ರೋನ್ಗಳ ಮೇಲೆ ಬಿಎಸ್ಎಫ್ ಯೋಧರು ಗುಂಡು ಹಾರಿಸಿದರು ಎಂದು ಜೋಷಿ ಮಾಹಿತಿ ನೀಡಿದರು. ಬಳಿಕ ಸಾಕಷ್ಟು ಹುಡುಕಾಟದ ನಂತರ ಬಿಎಸ್ಎಫ್ ಯೋಧರು ಎರಡು ಮರದ ಪೆಟ್ಟಿಗೆಗಳನ್ನು ಪತ್ತೆ ಮಾಡಿದ್ದಾರೆ.