ಜೀವನದಲ್ಲಿ ಒಮ್ಮೆಯಾದ್ರೂ ಪ್ರತಿಯೊಬ್ಬರೂ ರೈಲು ಪ್ರಯಾಣ ಮಾಡಿರ್ತಾರೆ. ನೀವು ಎಂದಾದರೂ ರೈಲ್ವೆ ನಿಲ್ದಾಣಗಳ ಸ್ವಚ್ಛತೆಯನ್ನು ಗಮನಿಸಿದ್ದೀರಾ? ಕೆಲವು ಸ್ಟೇಷನ್‌ಗಳಲ್ಲಿ ಕೊಳಕು ತುಂಬಿರುವುದನ್ನಂತೂ ನೋಡಿರಲೇಬೇಕು. ಇನ್ನು ಕೆಲವು ನಿಲ್ದಾಣಗಳು ಅತ್ಯಂತ ಸ್ವಚ್ಛವಾಗಿವೆ. ಭಾರತದ ಅತಿ ಸ್ವಚ್ಛ ರೈಲು ನಿಲ್ದಾಣಗಳು ಯಾವುವು ಅನ್ನೋದನ್ನು ನೋಡೋಣ.
ಜೈಪುರ: ಪಿಂಕ್ ಸಿಟಿ ಎಂದು ಕರೆಯಲ್ಪಡುವ ಜೈಪುರದ ಜಂಕ್ಷನ್ ರೈಲು ನಿಲ್ದಾಣ ಬಹಳ ಸ್ವಚ್ಛವಾಗಿದೆ. 88 ಬ್ರಾಡ್ ಗೇಜ್ ಮತ್ತು 22 ಮೀಟರ್ ಗೇಜ್ ರೈಲುಗಳು ಒಂದು ದಿನದಲ್ಲಿ ತಮ್ಮ ಗಮ್ಯಸ್ಥಾನಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರಾಜಸ್ಥಾನದ ಏಕೈಕ ನಿಲ್ದಾಣವೆಂದರೆ ಜೈಪುರ. ಈ ರೈಲು ನಿಲ್ದಾಣವು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸುವ ನಿಲ್ದಾಣವಾಗಿದ್ದರೂ ಇಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ.
ಜಮ್ಮುವಿನ ತಾವಿ: ಜಮ್ಮು ಮತ್ತು ಕಾಶ್ಮೀರದ ತಾವಿ ರಾಜ್ಯದ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ. ಈ ರೈಲ್ವೇ ನಿಲ್ದಾಣವು ಭಾರತದ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಪ್ರವಾಸಿಗರು ಕಾಶ್ಮೀರ ಕಣಿವೆಗೆ ಹೋಗಲು ಈ ನಿಲ್ದಾಣವನ್ನು ಬಳಸುತ್ತಾರೆ. ಈ ನಿಲ್ದಾಣವನ್ನು ನೋಡುವುದೇ ಪ್ರಯಾಣಿಕರಿಗೆ ಒಂದು ರೀತಿಯ ಸಂಭ್ರಮ. ಕಾಶ್ಮೀರದಷ್ಟೇ ಇದು ಸುಂದರವಾಗಿದೆ.
ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡ ರೈಲು ನಿಲ್ದಾಣ ಕೂಡ ಸ್ವಚ್ಛತೆಯ ವಿಷಯದಲ್ಲಿ ಈ ನಿಲ್ದಾಣಗಳಿಗಿಂತ ಹಿಂದೆ ಉಳಿದಿಲ್ಲ. ವಿಜಯವಾಡದ ದೇವಾಲಯಗಳು ಬಹಳ ಪ್ರಸಿದ್ಧವಾಗಿವೆ. ಇಲ್ಲಿಗೆ ಭೇಟಿ ನೀಡಲು ದೂರದ ಊರುಗಳಿಂದ ಜನರು ಬರುತ್ತಾರೆ. ಹಾಗಾಗಿ ರೈಲು ನಿಲ್ದಾಣದ ಸ್ವಚ್ಛತೆ ಬಗ್ಗೆ ಸಾಕಷ್ಟು ಕಾಳಜಿ ವಹಿಸಲಾಗಿದೆ.
ಜೋಧ್‌ಪುರ: ಜೋಧ್ಪುರ ರೈಲ್ವೆ ಸ್ಟೇಶನ್ ಕೂಡ ಅತ್ಯಂತ ಸ್ವಚ್ಛವಾಗಿ ಪ್ರಯಾಣಿಕರ ಗಮನ ಸೆಳೆಯುತ್ತದೆ. ಪ್ರಯಾಣಿಕರು ಇಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಪಡೆಯುತ್ತಾರೆ. ಸ್ವಚ್ಛತೆಯಿಂದ ಹಿಡಿದು ನಿರ್ವಹಣೆಯವರೆಗೂ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಹರಿದ್ವಾರ: ಈ ಜಂಕ್ಷನ್ ರೈಲು ನಿಲ್ದಾಣವು ಹರಿದ್ವಾರ ನಗರದ ರೈಲು ನಿಲ್ದಾಣವಾಗಿದೆ. ಹರಿದ್ವಾರವು ಧಾರ್ಮಿಕ ಕಾರಣಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿಗೆ ಲಕ್ಷಾಂತರ ಜನರು ಬರುವುದರಿಂದ ನಿಲ್ದಾಣದ ಸ್ವಚ್ಛತೆಯನ್ನು ಕಾಪಾಡಲಾಗ್ತಿದೆ. ಭಾರತದ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಹರಿದ್ವಾರ ಜಂಕ್ಷನ್ ರೈಲು ನಿಲ್ದಾಣವೂ ಸೇರಿದೆ.