ಈಗ ಸ್ಮಾರ್ಟ್‌ಫೋನ್ ಸಾಮಾನ್ಯವಾಗಿಬಿಟ್ಟಿದೆ. ಭಾರತದಲ್ಲಿ ಕೂಡ ಅತ್ಯಂತ ಅಗ್ಗದ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಚೆಂದದ ವಿನ್ಯಾಸ ಮತ್ತು ಬಲವಾದ ಬ್ಯಾಟರಿ ಹೊಂದಿರುವ ಅಗ್ಗದ ಸ್ಮಾರ್ಟ್‌ಫೋನ್ ಕೊಳ್ಳಲು ಬಯಸಿದ್ರೆ ಅಂತಹ ಟಾಪ್ 5 ಮೊಬೈಲ್‌ಗಳ ವಿವರ ಇಲ್ಲಿದೆ.
REDMI A1+
ಈ ಸ್ಮಾರ್ಟ್‌ಫೋನ್‌ನ ಬೆಲೆ 6,299 ರೂಪಾಯಿ. ಇದು 3 GB RAM ಜೊತೆಗೆ 32 GB ROM ಮತ್ತು 512 GB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಹೊಂದಿದೆ. ಇದರಲ್ಲಿ 16.56 cm HD + ಡಿಸ್‌ಪ್ಲೇ ಲಭ್ಯವಿದೆ. 8 MP ಬ್ಯಾಕ್ ಕ್ಯಾಮೆರಾ, 5MP ಫ್ರಂಟ್ ಕ್ಯಾಮರಾ ಅಳವಡಿಸಲಾಗಿದೆ. 5000 mAh ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿದೆ. ಸ್ಮಾರ್ಟ್ಫೋನ್ Mediatek Helio A22 ಪ್ರೊಸೆಸರ್ನೊಂದಿಗೆ ಬರುತ್ತದೆ.
Infinix SMART 7
ಈ ಸ್ಮಾರ್ಟ್‌ಫೋನ್‌ನ ಬೆಲೆ 7,299 ರೂಪಾಯಿ. ಇದು Unisoc Spreadtrum SC9863A1 ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ 4 GB RAM ಜೊತೆಗೆ 64 GB ROM ಮತ್ತು 2 TBವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ನೀಡಲಾಗಿದೆ. ಸ್ಮಾರ್ಟ್ಫೋನ್ 6.6 ಇಂಚಿನ HD + ಡಿಸ್‌ಪ್ಲೇ ಹೊಂದಿದೆ. ಹಿಂಭಾಗದಲ್ಲಿ 13MP + AI ಲೆನ್ಸ್‌ನ ಕ್ಯಾಮೆರಾವನ್ನು ನೀಡಲಾಗಿದೆ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ 6000 mAh ಬ್ಯಾಟರಿಯನ್ನು ಹೊಂದಿದೆ.
POCO C51
POCO C51 ಸ್ಮಾರ್ಟ್‌ಫೋನ್ ಬೆಲೆ 7,999 ರೂಪಾಯಿ. ಈ ಸ್ಮಾರ್ಟ್‌ಫೋನ್‌ನಲ್ಲಿ Helio G36 ಪ್ರೊಸೆಸರ್ ಅನ್ನು ನೀಡಲಾಗಿದೆ. ಇದರೊಂದಿಗೆ 5000 mAh ಬ್ಯಾಟರಿ ಸಹ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. POCO C51 ಸ್ಮಾರ್ಟ್‌ಫೋನ್ 4 GB RAM ಜೊತೆಗೆ 64 GB ROM ಅನ್ನು ಪಡೆಯುತ್ತದೆ ಮತ್ತು 1 TB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 6.52 ಇಂಚಿನ HD + ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರ ಹಿಂಭಾಗದಲ್ಲಿ 8MP ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾ ಲಭ್ಯವಿದೆ.
SAMSUNG Galaxy F04
ಈ ಸ್ಮಾರ್ಟ್‌ಫೋನ್ ಅನ್ನು 9,499 ರೂಪಾಯಿಗೆ ಖರೀದಿಸಬಹುದು. ಇದು 4 GB RAM ಮತ್ತು 64 GB ROM ಜೊತೆಗೆ 1 TB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ಗೆ 6.5 ಇಂಚಿನ HD ಡಿಸ್‌ಪ್ಲೇ ನೀಡಲಾಗಿದೆ. ಇದು 13MP + 2MP ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 5000 mAh ಲಿಥಿಯಂ ಐಯಾನ್ ಬ್ಯಾಟರಿಯ ಮೇಲೆ Mediatek Helio P35 ಪ್ರೊಸೆಸರ್ ಅನ್ನು ಸಹ ಪಡೆಯುತ್ತಾರೆ.
SAMSUNG Galaxy F13
ಈ ಸ್ಮಾರ್ಟ್‌ಫೋನ್ ಅನ್ನು 10,999 ರೂಪಾಯಿಗೆ ಖರೀದಿಸಬಹುದು. ಇದರಲ್ಲಿ ಗ್ರಾಹಕರಿಗೆ 64 GB ROM ಜೊತೆಗೆ 4 GB RAM ಮತ್ತು 1 TB ವರೆಗೆ ವಿಸ್ತರಿಸಬಹುದಾದ ಮೆಮೊರಿಯನ್ನು ನೀಡಲಾಗುತ್ತದೆ. ಇದರ ಡಿಸ್‌ಪ್ಲೇ 6.6 ಇಂಚುಗಳಷ್ಟಿದೆ. 50MP + 5MP + 2MP ಹಿಂಭಾಗದ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಪಡೆಯುತ್ತಾರೆ. ಈ ಸ್ಮಾರ್ಟ್‌ಫೋನ್‌ನಲ್ಲಿ Exynos 850 ಪ್ರೊಸೆಸರ್ ಜೊತೆಗೆ 6000 mAh ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.