
ಸಾವಯವ ಕೃಷಿಗಾಗಿ ಕುವೈತ್ ನ ಖಾಸಗಿ ಕಂಪನಿಯೊಂದು ಭಾರತದಿಂದ 192 ಸಾವಿರ ಕೆಜಿ ಸಗಣಿಯನ್ನು ಆಮದು ಮಾಡಿಕೊಂಡಿದೆ. ಜೈಪುರದ ಗೋಶಾಲೆಯಿಂದ ಸಗಣಿಯನ್ನು ರಫ್ತು ಮಾಡಲಾಗುತ್ತಿದ್ದು, ಜೂನ್ 15ರಂದು ಮೊದಲ ಬ್ಯಾಚ್ ಸಗಣಿ ರವಾನೆಯಾಗಿದೆ.
ಬೆಳೆಗಳ ಉತ್ಪಾದನೆ ಹೆಚ್ಚಿಸಲು ಸಗಣಿ ಅತ್ಯಂತ ಉಪಯುಕ್ತ ಎನ್ನಲಾಗಿದ್ದು, ಹೀಗಾಗಿ ಹಸುವಿನ ಸಗಣಿ ಗೊಬ್ಬರ ಬಳಸಿ ಸಾವಯವ ಕೃಷಿ ನಡೆಸಲು ಕುವೈತ್ ಮುಂದಾಗಿದೆ. ಸಗಣಿ ರಫ್ತಿಗೆ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು ಹೇಳಲಾಗಿದೆ.
BIG NEWS: ಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಐಡಿಗೆ ಆಧಾರ್ ಜೋಡಣೆಗೆ ಆದೇಶ
ಹಸುವಿನ ಸಗಣಿ ಬಳಸಿ ಬೆಳೆಯುವ ಬೆಳೆಗಳನ್ನು ಸೇವನೆ ಮಾಡುವುದರಿಂದ ವಿವಿಧ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗಿದ್ದು, ಭಾರತದಲ್ಲಿ ಈ ಕುರಿತು ಈಗಾಗಲೇ ಹಲವು ಸಂಶೋಧನೆಗಳು ನಡೆಯುತ್ತಿವೆ. ಇದರ ಮಧ್ಯೆ ಕುವೈತ್ ಭಾರತದಿಂದ ಸಗಣಿ ತರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ.