ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ತೀವ್ರವಾಗಿ ಅಲ್ಲದಿದ್ದರೂ ಭಾರತಕ್ಕೆ ಸೌಮ್ಯವಾದ ಹೊಸ ಕೊರೋನಾ ಅಲೆಯು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಇಬ್ಬರು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.
ಐಐಟಿ ಕಾನ್ಪುರದ ಮನೀಂದ್ರ ಅಗರವಾಲ್ ಮತ್ತು ಐಐಟಿ ಹೈದರಾಬಾದ್‌ನ ಎಂ ವಿದ್ಯಾಸಾಗರ್, ಭಾರತದ ಮೂರನೇ ಅಲೆ ಸಂದರ್ಭದಲ್ಲಿ ಪ್ರತಿದಿನ 1.5 ರಿಂದ 1.8 ಲಕ್ಷದವರೆಗೆ ಪ್ರಕರಣಗಳು ತಲುಪಬಹುದು ಎಂದು ಹೇಳಿದ್ದಾರೆ. ಓಮಿಕ್ರಾನ್ ರೂಪಾಂತರವನ್ನು ಮೊದಲು ವರದಿ ಮಾಡಿದ ದಕ್ಷಿಣ ಆಫ್ರಿಕಾದ ಪರಿಸ್ಥಿತಿಯನ್ನು ನಾವು ಗಣನೆಗೆ ತೆಗೆದುಕೊಂಡರೆ, ಓಮಿಕ್ರಾನ್ ಹರಡುವಿಕೆಯು ಭಾರತದಲ್ಲಿಯೂ ವೇಗವಾಗಿರುತ್ತದೆ, ಆದರೆ ಶಿಖರದಿಂದ ಪತನವು ವೇಗವಾಗಿರುತ್ತದೆ. ಮನೀಂದ್ರ ಅವರ ಪ್ರಕಾರ, ವಿಶ್ವದಲ್ಲಿ ಮೂರು ವಾರಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಅದರ ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಪ್ರಕರಣಗಳ ಸಂಖ್ಯೆ ಈಗಾಗಲೇ ಇಳಿಮುಖವಾಗುತ್ತಿರುವುದು ಒಟ್ಟಿಗೆ ಕಂಡುಬಂದಿದೆ.
ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ: ಕೊರೊನಾ ಲಸಿಕೆ ಪಡೆದವರಿಗೆ ಸಿಗಲಿದೆ ರಿಯಾಯಿತಿ ಟಿಕೆಟ್
ಇನ್ನು CDC(Centers for decease control and prevention) ಪ್ರಕಾರ ಒಮಿಕ್ರಾನ್ ಅಂಕಿಅಂಶ ನೋಡುವುದಾದ್ರೆ, ಪ್ರಕರಣಗಳಲ್ಲಿ ಪ್ರಸ್ತುತ ಹೆಚ್ಚಳವಾಗ್ತಿದ್ದು, ಮುಂಬರುವ ವಾರಗಳಲ್ಲಿ ರಾಷ್ಟ್ರದೆಲ್ಲೆಡೆ ಗರಿಷ್ಠ ಪ್ರಕರಣಗಳು ದೃಢವಾಗುವ ಸಾಧ್ಯತೆಯಿದೆ. ಅದರಲ್ಲೂ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಮೂರನೇ ಅಲೆಯ ಗರಿಷ್ಠ ಮಟ್ಟ ದಾಖಲಾಗಬಹುದು ಎಂದು ಹೇಳಲಾಗ್ತಿದೆ. ಇದರ ಜೊತೆಗೆ ಪ್ರಕರಣಗಳ ಉಲ್ಬಣ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ, ಅದರ ಕುಸಿಯುವಿಕೆ ಕೂಡ ಅಷ್ಟೇ ವೇಗವಾಗಿ ಶುರುವಾಗುತ್ತದೆ ಎಂಬ ಅಂಶ ಹೊರಬಿದ್ದಿದೆ. ಒಟ್ಟಿನಲ್ಲಿ 2022 ರ ಏಪ್ರಿಲ್ ತಿಂಗಳ ನಂತ್ರ ಪ್ರಕರಣಗಳು ಹಿಡಿತಕ್ಕೆ ಬರಬಹುದು ಎಂಬುದು ತಜ್ಞರ ಅಭಿಪ್ರಾಯ.