ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ ಇ – ಪಾಸ್ಪೋರ್ಟ್: ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಮಾಹಿತಿ 07-01-2022 7:40AM IST / No Comments / Posted In: Latest News, India, Live News ದೇಶದ ನಾಗರಿಕರು ಶೀಘ್ರದಲ್ಲಿಯೇ ಇ ಪಾಸ್ಪೋರ್ಟ್ಗಳನ್ನು ಹೊಂದಲಿದ್ದಾರೆ. ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಟ್ವೀಟ್ ಮೂಲಕ ಖಚಿತ ಮಾಹಿತಿ ನೀಡಿದ್ದಾರೆ. ಇ ಪಾಸ್ಪೋರ್ಟ್ಗಳು ಬಯೋಮೆಟ್ರಿಕ್ ಡೇಟಾವನ್ನು ಸುರಕ್ಷಿತಗೊಳಿಸುತ್ತವೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳಿಗೆ ಇ ಪಾಸ್ಪೋರ್ಟ್ಗಳನ್ನು ಅನುಗುಣವಾಗಿರುತ್ತವೆ. ಇ ಪಾಸ್ಪೋರ್ಟ್ಗಳನ್ನು ನಾಸಿಕ್ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್ನಲ್ಲಿ ಉತ್ಪಾದಿಸಲಾಗುತ್ತದೆ. ಹಲವಾರು ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ಪಾಸ್ಪೋರ್ಟ್ ಹೊಂದಿರುವವರು ಬಯೋಮೆಟ್ರಿಕ್ ಡೇಟಾ, ಹೆಸರು ಸೇರಿದಂತೆ ವಿವಿಧ ಪ್ರಮುಖ ಮಾಹಿತಿಗಳನ್ನು ಹೊಂದಲು ಇ ಪಾಸ್ಪೋರ್ಟ್ನಲ್ಲಿರುವ ಚಿಪ್ನ್ನು ಎಂಬೇಡ್ ಮಾಡಲಾಗುತ್ತದೆ. ಇದು ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಮೂಲಕ ಅನಧಿಕೃತ ಡೇಟಾ ವರ್ಗಾವಣೆಯನ್ನು ಅನುಮತಿಸದ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತದಲ್ಲಿ ಶೀಘ್ರದಲ್ಲಿಯೇ ಮುಂದಿನ ಜನರೇಷನ್ ಇ ಪಾಸ್ಪೋರ್ಟ್ಗಳು ಬರಲಿವೆ. ಸುರಕ್ಷಿತ ಬಯೋಮೆಟ್ರಿಕ್ ಡೇಟಾ, ಜಾಗತಿಕ ವಲಸೆ ಪೋಸ್ಟ್ಗಳಿಗೆ ಇದು ಸುಗಮ ಮಾರ್ಗವಾಗಿದೆ. ಇದನ್ನು ನಾಸಿಕ್ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್ನಲ್ಲಿ ನಿರ್ಮಿಸಲಾಗಿದೆ ಎಂದು ಭಟ್ಟಾಚಾರ್ಯ ಟ್ವೀಟ್ ಮಾಡಿದ್ದಾರೆ. India 🇮🇳 to soon introduce next-gen #ePassport for citizens – secure #biometric data– smooth passage through #immigration posts globally– @icao compliant– produced at India Security Press, Nashik– #eGovernance @passportsevamea @MEAIndia #AzadiKaAmritMahotsav pic.twitter.com/tmMjhvvb9W — Sanjay Bhattacharyya (@AmbSanjay_) January 5, 2022