ಲೆಕ್ಸಸ್ 2022ರ ಎನ್ಎಕ್ಸ್ 350ಎಚ್ (2022 ಲೆಕ್ಸಸ್ ಎನ್ಎಕ್ಸ್ 350ಎಚ್) ಹೈಬ್ರಿಡ್ ಎಸ್‍ಯುವಿ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಹೊಸ ಅವತಾರದಲ್ಲಿ, ಲೆಕ್ಸಸ್ ಎನ್ಎಕ್ಸ್ 350ಎಚ್ ಹೊರಭಾಗದಲ್ಲಿ ಹಲವಾರು ವಿನ್ಯಾಸ ನವೀಕರಣಗಳನ್ನು ಪಡೆಯುತ್ತದೆ. ಇದರೊಂದಿಗೆ ಹೈಬ್ರಿಡ್ ಪವರ್ ಟ್ರೈನ್ ಅನ್ನು ಬಿಡುಗಡೆ ಮಾಡಲಾಗಿದೆ. ಹೈಬ್ರಿಡ್ ಘಟಕವು ಸ್ವಯಂ ಚಾರ್ಜಿಂಗ್ ಆಗಿದ್ದು, ಪ್ರತಿ ಬಾರಿ ಚಾರ್ಜ್ ಮಾಡುವಾಗ ಪ್ಲಗ್ ಇನ್ ಮಾಡುವ ಅಗತ್ಯವಿಲ್ಲ ಎಂದು ಲೆಕ್ಸಸ್ ಹೇಳಿದೆ.
2022 ಲೆಕ್ಸಸ್ ಎನ್ಎಕ್ಸ್ 350ಎಚ್ ಎಸ್ ಯುವಿ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಇದನ್ನು ಎಲೆಕ್ಟ್ರಿಕ್ ಮೋಟರ್‌ಗೆ ಕೂಡ ಜೋಡಿಸಲಾಗಿದೆ. ಕಾರು ಸುಮಾರು 55 ಕಿಲೋಮೀಟರ್ ಎಲೆಕ್ಟ್ರಿಕ್ ವ್ಯಾಪ್ತಿಯನ್ನು ಮಾತ್ರ ನೀಡುತ್ತದೆ. ಈ ಎಂಜಿನ್ 192 ಎಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಹಂತದ ಇ-ಸಿವಿಟಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಕಂಪನಿಯು 2025 ರ ವೇಳೆಗೆ ತನ್ನ ಜಾಗತಿಕ ಪೋರ್ಟ್ಫೋಲಿಯೊದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಹೊಂದಿರುತ್ತದೆ.
2022 ಲೆಕ್ಸಸ್ ಎನ್ಎಕ್ಸ್ 350ಎಚ್ ಅನ್ನು ಹಲವಾರು ಬದಲಾವಣೆಗಳೊಂದಿಗೆ ನವೀಕರಿಸಲಾಗಿದೆ. ಸಿಂಗಲ್-ಪೀಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಗೆ ಸಂಯೋಜಿಸಲಾದ ಹೊಸ ಡಿಆರ್‌ಎಲ್‌ಗಳು, ಲೈಟ್ ಬಾರ್‌ಗೆ ಲಗತ್ತಿಸಲಾದ ಹೊಸ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಸ್ಪಿಂಡಲ್ ಗ್ರಿಲ್‌ಗಾಗಿ ಯು-ಟೈಪ್ ಪ್ಯಾಟರ್ನ್ ಇವುಗಳನ್ನು ಒಳಗೊಂಡಿವೆ.
2022 ಲೆಕ್ಸಸ್ ಎನ್ಎಕ್ಸ್ 350ಎಚ್ ಎಸ್ ಯುವಿ ಯ ಒಳಭಾಗವನ್ನು ಸಹ ನವೀಕರಿಸಲಾಗಿದೆ. ಇದು ಈಗ ದೊಡ್ಡದಾದ 14.0 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಫೋಲ್ಡಿಂಗ್ ರಿಯರ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಕಸ್ಟಮೈಸ್ ಮಾಡಬಹುದಾದ ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಇದು 360 ಡಿಗ್ರಿ ಪಾರ್ಕಿಂಗ್ ಕ್ಯಾಮರಾ, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ವೈರ್‌ಲೆಸ್ ಚಾರ್ಜಿಂಗ್, 64 ಬಣ್ಣದ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಹೊಂದಿದೆ. ಎಸ್‍ಯುವಿ ಯ ಹಿಂಭಾಗದ ಸೀಟುಗಳು ಹೆಚ್ಚಿನ ಸ್ಥಳಾವಕಾಶವನ್ನು ನೀಡಲು ಫೋಲ್ಡಿಂಗ್ ವೈಶಿಷ್ಟ್ಯವನ್ನು ಹೊಂದಿದೆ.