ಭಾರತೀಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ (ISAR) ಪ್ರಕಾರ, ಬಂಜೆತನವು ಪುರುಷರು ಮತ್ತು ಮಹಿಳೆಯರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಪ್ರಸ್ತುತ 10-14 ಪ್ರತಿಶತ ಭಾರತೀಯ ದಂಪತಿಗಳ ಮೇಲೆ ಬಂಜೆತನ ಪರಿಣಾಮ ಬೀರುತ್ತಿದೆ. ಒಂದು ವರ್ಷದಿಂದ ನೈಸರ್ಗಿಕವಾಗಿ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಇದುವರೆಗೂ ಸಾಧ್ಯವಾಗದೇ ಇದ್ದರೆ ವೈದ್ಯಕೀಯ ಸಹಾಯವನ್ನು ಪಡೆಯುವುದು ಅನಿವಾರ್ಯ. ಏಕೆಂದರೆ ಗರ್ಭಧರಿಸದೇ ಇರುವುದಕ್ಕೆ ಹಲವಾರು ವೈದ್ಯಕೀಯ ಕಾರಣಗಳಿರುತ್ತವೆ. ವೈದ್ಯಕೀಯ ಚಿಕಿತ್ಸೆ ಅಥವಾ ಜೀವನಶೈಲಿಯ ಬದಲಾವಣೆಗಳ ಮೂಲಕ ಇವುಗಳನ್ನು ಸರಿಪಡಿಸಬಹುದು.
ಆದರೆ ಅನೇಕರು ಈಗಲೂ ಬಂಜೆತನದ ಸಮಸ್ಯೆಗಳು ಮತ್ತು IVF ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿಲ್ಲ. IVF ಬಂಜೆತನಕ್ಕೆ ಇರುವ ಸಾಮಾನ್ಯ ಚಿಕಿತ್ಸೆಯ ಆಯ್ಕೆ ಎಂಬುದು ಜನಸಾಮಾನ್ಯರಿಗೆ ಅರಿವಾಗಿಲ್ಲ. ಕೆಲವು ಸಮಯದಿಂದ ನೈಸರ್ಗಿಕವಾಗಿ ಗರ್ಭಧಾರಣೆಗೆ ಪ್ರಯತ್ನಿಸಿ ವಿಫಲರಾದವರಿಗೆ ಐವಿಎಫ್ ಉತ್ತಮ ಆಯ್ಕೆಯಾಗಿದೆ. ಬಂಜೆತನಕ್ಕೆ ವೈದ್ಯಕೀಯ, ಆನುವಂಶಿಕ, ಜೀವನಶೈಲಿ ಸಂಬಂಧಿತ ಸಮಸ್ಯೆಗಳು ಕಾರಣವಾಗಬಹುದು. ವೈದ್ಯರ ಪ್ರಕಾರ ಪುರುಷರಲ್ಲಿ ವೀರ್ಯಾಣುಗಳ ಕೊರತೆ, ಮಹಿಳೆಯರಲ್ಲಿ ಕಡಿಮೆ ಅಂಡಾಣುಗಳ ಸಮಸ್ಯೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಜಡ ಜೀವನಶೈಲಿ, ಪರಿಸರ ಮಾಲಿನ್ಯ, ಮಾದಕ ವ್ಯಸನ, ಮದ್ಯಪಾನ ಮತ್ತು ಧೂಮಪಾನ. ಇದಲ್ಲದೆ ಹೆಚ್ಚಿನವರು ಪಿಸಿಓಡಿ, ಮಧುಮೇಹ ಮತ್ತು ಥೈರಾಯ್ಡ್ ಸೇರಿದಂತೆ ಅನೇಕ ತೊಂದರೆಗಳಿಂದ ಬಳಲುತ್ತಾರೆ. ಇದು ಕೂಡ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಬಂಜೆತನ ಎಂದಾಕ್ಷಣ ಅದು ಸ್ತ್ರೀಯರ ಸಮಸ್ಯೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಶೇ.20ರಷ್ಟು ಬಂಜೆತನವು ಪುರುಷರು ಮತ್ತು ಮಹಿಳೆಯರಿಂದ ಉಂಟಾಗುತ್ತದೆ. 40 ಪ್ರತಿಶತ ಅಂಶಗಳಿಂದ ಮತ್ತು 40 ಪ್ರತಿಶತ ಸ್ತ್ರೀ ಅಂಶಗಳಿಂದ ಉಂಟಾಗುತ್ತದೆ. ಮಹಿಳೆಯರು ಮತ್ತು ಪುರುಷರಲ್ಲಿ ಫಲವತ್ತತೆಯ ಸಮಸ್ಯೆ ಮತ್ತು ಬಂಜೆತನಕ್ಕೆ ಕಾರಣವೇನು ಎಂಬುದನ್ನು ನೋಡೋಣ.
ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣ
ಶ್ರೋಣಿಯ ಉರಿಯೂತದ ಕಾಯಿಲೆ
ಎಂಡೊಮೆಟ್ರಿಯೊಸಿಸ್
ಫಾಲಿಸಿಸ್ಟಿಕ್ ಓವರಿ ಸಿಂಡ್ರೋಮ್
ಫೆಲೋಪಿಯನ್ ಟ್ಯೂಬ್‌ಗಳಲ್ಲಿ ಅಡಚಣೆ
ಥೈರಾಯ್ಡ್
ಫೈಬ್ರಾಯ್ಡ್‌ಗಳು
ಪುರುಷರಲ್ಲಿ ವೀರ್ಯಾಣು ಕೊರತೆಗೆ ಕಾರಣ
ಧೂಮಪಾನ, ಮದ್ಯಪಾನ ಮತ್ತು ಔಷಧಗಳು
ಅಧಿಕ ವ್ಯಾಯಾಮ
ಶಾಖ
ಬಿಗಿಯಾದ ಬಟ್ಟೆಗಳನ್ನು ಧರಿಸುವುದು
ಉದ್ವೇಗ