ಭಾರತದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಉತ್ಪಾದಿಸುತ್ತಿರುವುದರ ಹಿಂದಿದೆಯಂತೆ ಈ ಕಾರಣ…! 04-04-2022 7:58AM IST / No Comments / Posted In: Latest News, India, Live News ವಿಶ್ವದಾದ್ಯಂತ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ದೇಶವಾಗಿ ಭಾರತ ಏಕೆ ಹೊರಹೊಮ್ಮಿದೆ ಎಂದು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ವಿವರಿಸಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಬಹುತೇಕ ಮೋಜಿನ, ಸ್ಪೂರ್ತಿದಾಯ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಆಗಾಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಇದೀಗ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಮಹೀಂದ್ರಾ ಹಂಚಿಕೊಂಡಿದ್ದಾರೆ. ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೆಚ್ಚಿನ ಸಾಮಾನುಗಳನ್ನು ಹೊತ್ತುಕೊಂಡು ಪ್ರಯಾಣಿಸುತ್ತಿರುವ ಚಿತ್ರವನ್ನು ಅವರು ಟ್ವೀಟ್ ಮಾಡಿದ್ದಾರೆ. ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಏಕೆ ತಯಾರಿಸುತ್ತದೆ ಎಂಬುದು ಈಗ ನಿಮಗೆ ತಿಳಿಯಬಹುದು ಎಂದು ಬರೆದು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ಹಲವಾರು ಕುರ್ಚಿಗಳು ಹಾಗೂ ಇತರೆ ವಸ್ತುಗಳ ಸಹಿತ ಪತಿ ಹಾಗೂ ಪತ್ನಿ ದ್ವಿಚಕ್ರ ವಾಹನದಲ್ಲಿ ಕುಳಿತಿರುವುದನ್ನು ನೋಡಬಹುದು. ಈ ಮಧ್ಯೆ, ಮಹೀಂದ್ರಾ & ಮಹೀಂದ್ರಾ, ತನ್ನ ಒಟ್ಟು ಮಾರಾಟವು ಮಾರ್ಚ್‌ನಲ್ಲಿ 54,643 ಯುನಿಟ್‌ಗಳಿಗೆ ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇಕಡಾ 35 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. Now you know why India makes the most two-wheelers in the world. We know how to carry the highest volume of cargo per square inch of wheel…We are like that only… #Sunday pic.twitter.com/3A0tHk6IoM — anand mahindra (@anandmahindra) April 3, 2022