alex Certify ಭಾರತದಲ್ಲಿರೋ ಅತಿ ವೇಗದ ‘ಎಲೆಕ್ಟ್ರಿಕ್ ಬೈಕ್‌’ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿರೋ ಅತಿ ವೇಗದ ‘ಎಲೆಕ್ಟ್ರಿಕ್ ಬೈಕ್‌’ಗಳು

ಪೆಟ್ರೋಲ್ ಬೈಕ್‌ಗಳು ಮಾತ್ರ ಭಾರೀ ವೇಗದಲ್ಲಿ ಓಡುತ್ತವೆ ಎಂಬುದು ತಪ್ಪು ಕಲ್ಪನೆ. ಎಲೆಕ್ಟ್ರಿಕ್‌ ಬೈಕ್‌ಗಳು ಕೂಡ ಕಡಿಮೆಯೇನಿಲ್ಲ. ಕೆಲವೇ ಸೆಕೆಂಡ್‌ಗಳಲ್ಲಿ ಸೂಪರ್‌ ಫಾಸ್ಟ್‌ ಆಗಿ ಸಂಚರಿಸಬಲ್ಲ ಎಲೆಕ್ಟ್ರಿಕ್‌ ಬೈಕ್‌ಗಳು ನಮ್ಮಲ್ಲಿವೆ. ಈ ಪಟ್ಟಿಯಲ್ಲಿನ ಮೊದಲ ಹೆಸರು ಹಾಪ್-ಆಕ್ಸೊ ಎಲೆಕ್ಟ್ರಿಕ್ ಬೈಕ್‌. ಈ ಬೈಕ್ ಕೇವಲ 4 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿಮೀ ವೇಗವನ್ನು ಪಡೆಯುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಮೀ. ಪೂರ್ಣ ಚಾರ್ಜ್ ಮಾಡಿದರೆ, ಇದು 150 ಕಿಮೀ ದೂರ ಕ್ರಮಿಸುತ್ತದೆ. ಇದರ ಆರಂಭಿಕ ಬೆಲೆ 1.48 ಲಕ್ಷ ರೂಪಾಯಿ.

ಎರಡನೇ ಸ್ಥಾನದಲ್ಲಿದೆ ಓಬೆನ್ ರೋಹ್ರೆರ್ ಎಲೆಕ್ಟ್ರಿಕ್ ಬೈಕ್‌. ಇದು ಕೇವಲ 3 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿಮೀ ವೇಗವನ್ನು ಪಡೆಯುತ್ತದೆ. ಗಂಟೆಗೆ 100 ಕಿಮೀ ವೇಗವನ್ನು ಇದು ಹೊಂದಿದೆ. ಈ ಬೈಕ್‌ನ ಆರಂಭಿಕ ಬೆಲೆ 1.5 ಲಕ್ಷ ರೂಪಾಯಿ.

ಮೂರನೇ ಸ್ಥಾನದಲ್ಲಿದೆ Tork Kratos-R ಬೈಕ್.‌ ಇದು 0-40 ಕಿಮೀ ವೇಗವನ್ನು 3.5 ಸೆಕೆಂಡುಗಳಲ್ಲಿ ತಲುಪಬಲ್ಲದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 101.1 ಕಿ.ಮೀ. ಈ ಎಲೆಕ್ಟ್ರಿಕ್ ಬೈಕ್ನ ಆರಂಭಿಕ ಬೆಲೆ 1.78 ಲಕ್ಷ ರೂಪಾಯಿ ಇದೆ.

ಕಬೀರಾ ಮೊಬಿಲಿಟಿ KM 4000 ಎಲೆಕ್ಟ್ರಿಕ್ ಬೈಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಬೈಕ್ ಕೇವಲ 3.2 ಸೆಕೆಂಡುಗಳಲ್ಲಿ 0-40 ಕಿಮೀ ವೇಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಮೈಲೇಜ್‌ ಗಂಟೆಗೆ 120 ಕಿಮೀ. ಈ ಎಲೆಕ್ಟ್ರಿಕ್ ಬೈಕ್‌ನ ಆರಂಭಿಕ ಬೆಲೆ 1.69 ಲಕ್ಷ ರೂಪಾಯಿ.

ಈ ಪಟ್ಟಿಯಲ್ಲಿ ಐದನೇ ಎಲೆಕ್ಟ್ರಿಕ್ ಬೈಕ್‌ ಅಲ್ಟ್ರಾವೈಲೆಟ್ F77. ಈ ಬೈಕ್‌ ಕೇವಲ 2.9 ಸೆಕೆಂಡುಗಳಲ್ಲಿ 0-60 ಕಿಮೀ ವೇಗವನ್ನು ಪಡೆಯಬಲ್ಲದು. ಅದರ ಗರಿಷ್ಠ ವೇಗ ಗಂಟೆಗೆ 152 ಕಿಮೀ ವರೆಗೆ ಇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...