ಬರ್ಮಾದ ಯುವಕನೊಬ್ಬ ಬ್ಯಾಂಕಾಕ್ ನಲ್ಲಿ ಕೆಲಸ ಮಾಡುತ್ತಿದ್ದು, ಆತ ಕರ್ನಾಟಕವಿರಲಿ ಭಾರತಕ್ಕೇ ಈವರೆಗೂ ಬಂದಿಲ್ಲವಂತೆ. ಆದರೂ ಕೂಡ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುತ್ತಾನೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ನಲ್ಲಿ ನಾರಾಯಣ ಯಾಜಿಯವರು ಇದರ ವಿಡಿಯೋವನ್ನು ಹಂಚಿಕೊಂಡಿದ್ದು, ಸಂತೋಷ್ ಎಂಬ ಈ ಯುವಕ, ಕರ್ನಾಟಕದ ಗ್ರಾಹಕರ ಜೊತೆ ಮಾತನಾಡಿಯೇ ಕನ್ನಡ ಕಲಿತಿದ್ದಾರೆ.
ಇವರ ಅಂಗಡಿಗೆ ಪ್ರತಿನಿತ್ಯ 20 ರಿಂದ 30 ಮಂದಿ ಕನ್ನಡಿಗರು ಭೇಟಿ ನೀಡುತ್ತಾರಂತೆ. ಅವರೊಂದಿಗೆ ಮಾತನಾಡಿಯೇ ಸಂತೋಷ್ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದಾರೆ.
ಅಷ್ಟೇ ಅಲ್ಲ ಗೂಗಲ್ ಟ್ರಾನ್ಸ್ ಲೇಟ್ ಸಹಾಯದಿಂದ ‘ಕರ್ನಾಟಕದ ಯಾತ್ರಿಕರಿಗೆ ಸುಸ್ವಾಗತ. ನಾನು ಕನ್ನಡ ಅಭಿಮಾನಿ. ನನಗೂ ಕನ್ನಡ ಬರುತ್ತದೆ. ಪರಗಣಿಸಿ’ ‘ಜಯ ಕರ್ನಾಟಕ’ ಎಂದು ಅವರೇ ಬರೆದಿದ್ದು, ಜೊತೆಗೆ ‘ನಾನು ಅಪ್ಪು ಪ್ರೇಮಿ’ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
https://www.youtube.com/watch?v=Z0AYoBUlPCo&feature=youtu.be