ಮುಂಬರುವ ದಿನಗಳಲ್ಲಿ ವಿಶ್ವಕ್ಕೆ ಆರ್ಥಿಕ ಬಿಕ್ಕಟ್ಟು ಸಂಕಷ್ಟ ತಂದೊಡ್ಡಲ್ಲಿದೆ ಎಂಬ ಮಾತುಗಳ ಮಧ್ಯೆ ಬಹು ರಾಷ್ಟ್ರೀಯ ಕಂಪನಿಗಳಾದ ಟ್ವಿಟರ್, ಗೂಗಲ್, ಅಮೆಜಾನ್, ಮೆಟಾ ಹಾಗೂ ಸಿಸ್ಕೋ ಸೇರಿದಂತೆ ಹಲವು ಸಂಸ್ಥೆಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಈಗಾಗಲೇ ಕೆಲಸ ಕಂಡಿರುವವರ ಸಂಖ್ಯೆ ಲಕ್ಷಕ್ಕೂ ಅಧಿಕವಾಗಿದೆ.
ಈ ಆರ್ಥಿಕ ಬಿಕ್ಕಟ್ಟು ಭಾರತಕ್ಕೆ ಹೆಚ್ಚಿನ ಪರಿಣಾಮ ಬೀರಲಾರದು ಎಂಬ ಮಾತುಗಳ ಮಧ್ಯೆ ಪುಣೆಯಲ್ಲಿ ಕಚೇರಿ ಹೊಂದಿರುವ ಅಮೆರಿಕಾ ಮೂಲದ Fidelity National information service ನಾನೂರಕ್ಕೂ ಅಧಿಕ ಭಾರತೀಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.
ಈಗಾಗಲೇ ಭಾರತೀಯ ಮೂಲದ ಸ್ಟಾರ್ಟಾಪ್ ಕಂಪನಿಗಳಾದ ಬೈಜೂಸ್ ಹಾಗೂ ಝೋಮ್ಯಾಟೋ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುತ್ತಿದ್ದು, ಇವರುಗಳಿಗೆ ನೆರವಾಗುವುದಾಗಿ ಟಾಟಾ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್ ಹಾಗೂ ಸಾಮಾಜಿಕ ಜಾಲತಾಣ ಕಂಪನಿ Koo ಘೋಷಿಸಿದೆ.