ಭಾನುವಾರವೆಂದ್ರೆ ಎಲ್ಲರಿಗೂ ಇಷ್ಟ. ಭಾನುವಾರ ಯಾವಾಗ ಬರುತ್ತೆ ಎಂದು ಬಹುತೇಕರು ಕಾಯ್ತಾ ಇರ್ತಾರೆ. 6 ದಿನ ಓಡಿ ಓಡಿ ಸುಸ್ತಾಗಿರುವ ಜನರು ಭಾನುವಾರ ಸಂಪೂರ್ಣ ವಿಶ್ರಾಂತಿ ಪಡೆಯುತ್ತಾರೆ. ತಮಗಿಷ್ಟ ಬಂದಂತೆ ದಿನ ಕಳೆಯುತ್ತಾರೆ. ಭಾನುವಾರದ ಮೋಜು-ಮಸ್ತಿಯಲ್ಲಿರುವ ನಾವು ಸೂರ್ಯ ನಾರಾಯಣ ಮುನಿಸಿಕೊಳ್ಳುವ ಕೆಲಸ ಮಾಡಿ ಮಾನ-ಸನ್ಮಾನಕ್ಕೆ ಧಕ್ಕೆ ತಂದುಕೊಳ್ಳುತ್ತೇವೆ.
ಸೂರ್ಯ ನಾರಾಯಣ ಮುನಿಸಿಕೊಳ್ಳುವಂತಹ ಕೆಲಸಗಳನ್ನು ಭಾನುವಾರ ಮಾಡಬೇಡಿ. ನೀವು ಮಾಡುವ ಕೆಲಸದ ಬಗ್ಗೆ ಗಮನವಿರಲಿ. ಭಾನುವಾರ ಕೆಲಸಕ್ಕೆ ಹೋಗುವ ಆತುರ ಇರೋದಿಲ್ಲ. ಹಾಗಾಗಿ ಜನರು ಬೆಳಿಗ್ಗೆ ತಡವಾಗಿ ಏಳ್ತಾರೆ. ಸೂರ್ಯ ನೆತ್ತಿ ಮೇಲೆ ಬಂದ ನಂತ್ರ ಹಾಸಿಗೆಯಿಂದ ಎದ್ದರೆ ಆಯಸ್ಸು, ಧನ-ದಾನ್ಯ, ಕೀರ್ತಿ, ಜ್ಞಾನ, ಸಂಪತ್ತಿನಲ್ಲಿ ಇಳಿಕೆಯಾಗುತ್ತದೆ.
ರವಿವಾರ ಸೂರ್ಯೋದಯದ ನಂತ್ರ ಏಳಬೇಡಿ. ಹಾಗೆ ಸೂರ್ಯಾಸ್ತದ ವೇಳೆ ಮಲಗಬೇಡಿ. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.
ಯಾರನ್ನೂ ಅವಮಾನಿಸಬೇಡಿ. ನಿಮ್ಮ ಈ ತಪ್ಪು ಒಳ್ಳೆ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ.
ಬೆಳಿಗ್ಗೆ ಬೇಗ ಎದ್ದು ಸ್ವಚ್ಛ ಬಟ್ಟೆ ಧರಿಸಿ ಸೂರ್ಯ ದೇವನಿಗೆ ಜಲವನ್ನು ಅರ್ಪಿಸಿ. ‘ಆದಿತ್ಯ ಹೃದಯಂ’ ಸ್ತೋತ್ರ ಓದಿ.
ನೇತ್ರ ಹಾಗೂ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ‘ನೇತ್ರೋಪನಿಷತ್ ಸ್ತೋತ್ರ’ ಓದಿ. ಸಾಧ್ಯವಾದರೆ ಪ್ರತಿದಿನ ಇದನ್ನು ಓದಬಹುದು.
ಎಣ್ಣೆ ಹಾಗೂ ಉಪ್ಪನ್ನು ಬಳಸಬೇಡಿ. ಕೇವಲ ಒಂದು ಸಮಯ ಮಾತ್ರ ಭೋಜನ ಮಾಡಿ. ಹೀಗೆ ಮಾಡಿದ್ರೆ ಅನೇಕ ಸಮಸ್ಯೆಗಳನ್ನು ದೂರ ಓಡಿಸಬಹುದು.