ಮೇಷ : ನಿರುದ್ಯೋಗಿಗಳಿಗೆ ಶುಭ ಸುದ್ದಿ ಕಾದಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿದೆ. ಉದ್ಯಮಿಗಳಿಗೆ, ವೈದ್ಯ ವೃತ್ತಿಯವರಿಗೆ ಲಾಭವಿದೆ. ಹಿರಿಯರ ಜೊತೆ ವಾದ ಮಾಡುವಂತಹ ಸಂದರ್ಭ ಎದುರಾಗಬಹುದು. ತಾಳ್ಮೆಯನ್ನ ಕಾಯ್ದುಕೊಳ್ಳಿ. ಕುಲದೇವತೆಯನ್ನ ಆರಾಧಿಸಿ.
ವೃಷಭ : ಸಾಂಸಾರಿಕ ಜೀವನದಲ್ಲಿ ಕೊಂಚ ಕಿರಿಕಿರಿ ಕಂಡುಬರಲಿದೆ. ಕಚೇರಿ ವಿಚಾರದಲ್ಲಿ ನೀವು ತೆಗೆದುಕೊಂಡ ನಿರ್ಧಾರಗಳು ನಿಮ್ಮನ್ನ ಸರಿದಾರಿಗೆ ಕರೆದುಕೊಂಡು ಹೋಗಲಿದೆ. ಸ್ನೇಹಿತರ ಜೊತೆ ವಾದ ಬೇಡ. ಕರಕುಶಲ ಕಾರ್ಮಿಕರಿಗೆ ಉನ್ನತಿ ಇದೆ.
ಮಿಥುನ : ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರು ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಎಚ್ಚರದಿಂದಿರಿ. ಮಾರಾಟದ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ.
ಕಟಕ : ಗಣ್ಯವ್ಯಕ್ತಿಯನ್ನ ಭೇಟಿಯಾಗಲಿದ್ದೀರಿ. ಯಾವುದೇ ವಿಚಾರದ ಬಗ್ಗೆಯೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳೋದನ್ನ ರೂಢಿ ಮಾಡಿಕೊಳ್ಳಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಮನೆಗೆ ಅನಿರೀಕ್ಷಿತ ಅತಿಥಿ ಭೇಟಿ ನೀಡಲೂಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ : ಆದಾಯಕ್ಕಿಂತ ಖರ್ಚು ಹೆಚ್ಚಾಗದಂತೆ ನೋಡಿಕೊಳ್ಳಿ. ಕುಟುಂಬಸ್ಥರೊಂದಿಗೆ ಶಾಂತಿಯಿಂದ ವರ್ತಿಸಿ. ಸಂಗಾತಿ ನೀಡುವ ಸಲಹೆಗಳನ್ನ ಪೂರ್ತಿ ಕೇಳಿಸಿಕೊಳ್ಳಿ. ಮಕ್ಕಳ ಖರ್ಚು ವೆಚ್ಚಗಳನ್ನ ಸರಿದೂಗಿಸೋದು ಕೊಂಚ ಕಷ್ಟ ಎನಿಸಬಹುದು. ಯಾರು ಏನೇ ಟೀಕಿಸಿದರೂ ಆಕ್ರೋಶಕ್ಕೆ ಒಳಗಾಗಬೇಡಿ.
ಕನ್ಯಾ : ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಮಾತನ್ನ ನೆನಪಿನಲ್ಲಿಡಿ. ಪ್ರೇಮ ಜೀವನದಲ್ಲಿ ಏರಿಳಿತ ಕಂಡು ಬರಬಹುದು. ಆದಾಯಕ್ಕಿಂತ ಖರ್ಚು ಜಾಸ್ತಿ ಆಗೋದ್ರಿಂದ ಕೊಂಚ ಎಚ್ಚರ ಅಗತ್ಯ. ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯೊಂದು ಹೆಗಲೇರಲಿದೆ. ಜವಳಿ ಉದ್ಯಮಿಗಳಿಗೆ ಲಾಭವಿದೆ.
ತುಲಾ : ನಿಮ್ಮ ನಿರ್ಧಾರಗಳಿಗೆ ಮಹತ್ವ ನೀಡಿ. ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬ ಮಾತನ್ನ ನೆನಪಿನಲ್ಲಿಡಿ. ಕಚೇರಿಯಲ್ಲಿ ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಒಳಿತಿಗಾಗಿ ಕುಟುಂಬಸ್ಥರು ನೀಡುವ ಸಲಹೆಗಳನ್ನ ಆಲಿಸಿ. ಹೂಡಿಕೆ ಮಾಡುವವರಿಗೆ ಇದು ಸುದಿನವಾಗಿದೆ.
ವೃಶ್ಚಿಕ : ದೊಡ್ಡ ಸಾಧನೆ ಮಾಡಬೇಕು ಎಂದುಕೊಂಡಿದ್ದ ವಿದ್ಯಾರ್ಥಿಗಳ ಆಸೆ ಈಡೇರಲಿದೆ. ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯನ್ನ ಹೊರಬೇಕಾದ ಸಂದರ್ಭ ಎದುರಾಗಬಹುದು. ಬೇರೆಯವರು ನೀಡಿದ ಸಲಹೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಸಂತಾನ ಭಾಗ್ಯವಿದೆ.
ಧನು : ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಲಾಭ ಕಾದಿದೆ. ಬಹುದಿನಗಳಿಂದ ಕೊಂಡುಕೊಳ್ಳಬೇಕು ಎಂದುಕೊಂಡಿದ್ದ ವಸ್ತು ಇಂದು ನಿಮ್ಮದಾಗಲಿದೆ. ಉದ್ಯೋಗದಲ್ಲಿ ಯಾವುದೇ ಅಡಚಣೆ ಇಲ್ಲ. ವಿದ್ಯಾರ್ಥಿಗಳಿಗೆ ಇಂದು ಯಾವುದೇ ಲಾಭವಿಲ್ಲ. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು.
ಮಕರ : ಗೃಹದೋಷ ಎದುರಾಗುವ ಸಾಧ್ಯತೆ ಇದೆ. ಕುಟುಂಬಸ್ಥರ ಜೊತೆ ಕೂತು ಮನೆಯಲ್ಲೊಂದು ಶುಭ ಕಾರ್ಯ ನಡೆಸುವ ಬಗ್ಗೆ ಯೋಚನೆ ಮಾಡಿ. ಅವಿವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಲಿದೆ. ಕಚೇರಿಯಲ್ಲಿ ನೀವು ಶ್ರದ್ಧೆಯಿಂದ ಮಾಡಿದ ಕೆಲಸ ಫಲ ನೀಡಲಿದೆ. ನರಸಿಂಹನನ್ನ ಆರಾಧಿಸಿ.
ಕುಂಭ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ತಿವ್ಯಾಜ್ಯ ಇಂದು ರೋಚಕ ತಿರುವು ಪಡೆಯಲಿದೆ. ಕೃಷಿ ಕ್ಷೇತ್ರದವರಿಗೆ ಲಾಭ ಕಾದಿದೆ. ಸಂಗಾತಿ ಜೊತೆ ಕಿರಿಕಿರಿ ಉಂಟಾಗಬಹುದು. ದೂರ ಪ್ರಯಾಣದ ವೇಳೆ ಜನರಿಂದ ಎಚ್ಚರಿಕೆಯಿಂದಿರಿ. ಗಣೇಶ ಸ್ತ್ರೋತ್ರ ಪಠಿಸಿ.
ಮೀನ : ಸಿಟ್ಟಿನ ಭರದಲ್ಲಿ ಏನನ್ನೋ ಹೇಳಿ ಯಾರ ವಿರೋಧವನ್ನೂ ಕಟ್ಟಿಕೊಳ್ಳಲು ಹೋಗಬೇಡಿ. ವೈವಾಹಿಕ ಸಂಬಂಧದ ಬಗ್ಗೆ ಆಸಕ್ತಿ ಮೂಡಲಿದೆ. ಕಚೇರಿಯಲ್ಲಿ ಹೊಸ ಕೆಲಸಗಳನ್ನ ಕಲಿಯಲಿದ್ದೀರಿ. ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ತಾಳ್ಮೆಯಿಂದ ವ್ಯವಹರಿಸಿದಷ್ಟೂ ಉದ್ಯಮದಲ್ಲಿ ಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಇದು ಶುಭ ದಿನ.