ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ನಮ್ಮ ಭವಿಷ್ಯದ ಸೂಚನೆಯನ್ನು ನೀಡುತ್ತವೆ. ಮನೆಯಲ್ಲಿರುವ ವಸ್ತು, ಮನೆಗೆ ಬರುವ ಪ್ರಾಣಿ, ಚಿಕ್ಕದಾಗಿರುವ ಇರುವೆ ಕೂಡ ನಮ್ಮ ಮುಂದಿನ ಜೀವನದ ಬಗ್ಗೆ ಸೂಚನೆ ನೀಡುತ್ತದೆ.
ಮನೆಗೆ ಕೆಂಪು ಇರುವೆ ಬಂದರೆ ಒಂದು ಅರ್ಥ, ಕಪ್ಪು ಇರುವೆ ಬಂದ್ರೆ ಒಂದು ಅರ್ಥವಿದೆ. ಮನೆಗೆ ಕಪ್ಪು ಇರುವೆ ಬಂದ್ರೆ ಅದನ್ನು ಶುಭವೆನ್ನಲಾಗುತ್ತದೆ. ಕಪ್ಪು ಇರುವೆ ಅಕ್ಕಿ ಪಾತ್ರೆಗೆ ಬಂದಲ್ಲಿ ಶುಭ ಸಂಕೇತವಾಗಿದೆ. ಆರ್ಥಿಕ ವೃದ್ಧಿಯಾಗಲಿದೆ. ಭೌತಿಕ ಸುಖದ ಸಂಕೇತವಾಗಿದೆ.
ಕೆಂಪು ಇರುವೆ ಬಂದ್ರೆ ಜಾಗರೂಕರಾಗಿರಿ. ಕೆಂಪು ಇರುವೆ ಅಶುಭದ ಸಂಕೇತವೆಂದು ಪರಿಗಣಿಸಲಾಗಿದೆ. ವಿವಾದ, ಸಮಸ್ಯೆ, ಹಣದ ಖರ್ಚಿನ ಸೂಚಕವಾಗಿದೆ. ಅಹಿತಕರ ಘಟನೆ ನಡೆಯುವ ಸಂಕೇತವಾಗಿದೆ. ಒಂದು ವೇಳೆ ಕೆಂಪು ಇರುವೆ ಬಾಯಿಯಲ್ಲಿ ಮೊಟ್ಟೆ ಕಚ್ಚಿಕೊಂಡು ಹೊರಗೆ ಹೋದ್ರೆ ಅದು ಶುಭಕರ. ಇರುವೆಗಳಿಗೆ ತಿನ್ನಲು ಆಹಾರ ಹಾಕಬೇಕು.
ಇರುವೆ ಯಾವ ದಿಕ್ಕಿನಲ್ಲಿ ಬಂದಿದೆ ಎಂಬುದೂ ಮಹತ್ವ ಪಡೆಯುತ್ತದೆ. ಉತ್ತರದಿಂದ ಬಂದರೆ ಅದು ಶುಭಕರ. ಪಶ್ಚಿಮದಿಂದ ಬಂದರೆ ವಿದೇಶಿ ಪ್ರಯಾಣಕ್ಕೆ ಅವಕಾಶವಿದೆ ಎಂದರ್ಥ. ಪೂರ್ವ ದಿಕ್ಕಿನಿಂದ ಬಂದ್ರೆ ಧನಾತ್ಮಕ ಸೂಚನೆಯಾಗಿದೆ.