ನಿದ್ರೆಯಲ್ಲಿ ಕನಸು ಬೀಳೋದು ಸಾಮಾನ್ಯ ವಿಷ್ಯ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ನಿದ್ರೆಯಲ್ಲಿ ಬೀಳುವ ಸ್ವಪ್ನ ಹಾಗೂ ಭವಿಷ್ಯಕ್ಕೆ ಸಂಬಂಧವಿದೆ. ಶಾಸ್ತ್ರದ ಪ್ರಕಾರ ಕೆಲವೊಂದು ಕನಸು ಭವಿಷ್ಯದಲ್ಲಿ ಶ್ರೀಮಂತರಾಗುವ ಸಂಕೇತ ನೀಡುತ್ತದೆಯಂತೆ.
ಹೊರಗೆ ಹೋಗ್ತಿದ್ದ ವೇಳೆ ನಾಯಿ ಬಾಯಿಯಲ್ಲಿ ಆಹಾರವಿದ್ದಂತೆ ಕನಸು ಬಿದ್ದಲ್ಲಿ ಇದು ಶುಭ ಸಂಕೇತ. ಶೀಘ್ರ ಧನಲಾಭವಾಗುತ್ತದೆ ಎಂದರ್ಥ.
ಕನಸಿನಲ್ಲಿ ಕಿರೀಟ, ಹವಳದ ಹಾರ ಕಂಡು ಬಂದಲ್ಲಿ ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆಂದರ್ಥ. ಎಂದೂ ಇಂಥವರಿಗೆ ಧನಹಾನಿಯಾಗುವುದಿಲ್ಲವೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಕನಸಿನಲ್ಲಿ ಒಂಟೆ ಕಾಣಿಸಿಕೊಂಡರೆ ಆದಷ್ಟು ಬೇಗ ಹಣ ಪಡೆಯುತ್ತೀರಿ ಎಂದರ್ಥ. ದಾಳಿಂಬೆ ಹಣ್ಣು ಕಂಡಲ್ಲಿ ಕೂಡ ಸಂಪತ್ತು ಪ್ರಾಪ್ತಿಯಾಗುತ್ತದೆ.
ಕನಸಿನಲ್ಲಿ ಹಸಿರು ಗಿಡ, ಮರ ಪದೇ ಪದೇ ಕಾಣಿಸಿದ್ರೆ ಧನಪ್ರಾಪ್ತಿಯಾಗುತ್ತದೆ ಎಂದು ಅಂದಾಜಿಸಬಹುದು.
ಕನಸಿನಲ್ಲಿ ಬಿಳಿ ಹಾವು ಕಂಡು ಬಂದಲ್ಲಿ ಶೀಘ್ರವೇ ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಬೀಳಲಿದೆ ಎಂದರ್ಥ.