ಕೊರೊನಾ ದಾಳಿಯಿಂದ ನಮಗೆ ತಿಳಿಸಲಾಗಿರುವ ಪಾಠ ಎಂದರೆ ’ಬದುಕು ಅನಿಶ್ಚಿತ’ ಎನ್ನುವುದು. ಯಾವಾಗ ಏನು ಬೇಕಾದರೂ ಆಗಬಹುದು. ಹಾಗಾಗಿ ಕೂಡಲೇ ನಿಮ್ಮ ಹೆಸರಿನಲ್ಲಿ ಒಂದು ಆರೋಗ್ಯ ವಿಮೆ, ಟರ್ಮ್ ವಿಮೆಗಳನ್ನು ಖರೀದಿ ಮಾಡಿರಿ. ಒಂದೊಮ್ಮೆ ಅಕಾಲಿಕ ಸಾವು ಸಂಭವಿಸಿದರೆ ನಿಮ್ಮನ್ನು ಅವಲಂಬಿಸಿರುವವರಿಗೆ ಹೊರೆ ಆಗದಂತೆ ದೊಡ್ಡ ಕೊಡುಗೆಯನ್ನು ನೀಡಲು ಇದೇ ಸಕಾಲ.
2. ಮೆಡಿಕಲ್ ಇನ್ಶುರೆನ್ಸ್:
ಆಸ್ಪತ್ರೆಗೆ ದಾಖಲಾಗಲು ಆರೋಗ್ಯ ವಿಮೆ ಜತೆಗೆ ಉತ್ತಮ ಪ್ಲಾನ್ ಇರುವ ಮೆಡಿಕಲ್ ಇನ್ಶುರೆನ್ಸ್ ಅಗತ್ಯ. ಅಂದರೆ, ಬಹುತೇಕ ಶಸ್ತ್ರಚಿಕಿತ್ಸೆಗಳಿಗೆ ವಿಮಾ ಕಂಪನಿಯಿಂದಲೇ ಹಣ ಪಾವತಿ ಮಾಡುವಂತಿರಬೇಕು. ಆಸ್ಪತ್ರೆಯಲ್ಲಿನ ಬೆಡ್ ಶುಲ್ಕ, ವೈದ್ಯರು-ಔಷಧಗಳ ಶುಲ್ಕವು ನಿಮಗೆ ಭಾರವಾಗದಂತೆ ವಿಮಾ ಪಾಲಿಸಿಯ ಯೋಜನೆಯಲ್ಲಿ ಎಲ್ಲವೂ ಒಳಪಡುವಂತಿರಬೇಕು. ಸ್ವಲ್ಪ ಮಟ್ಟದಲ್ಲಿ ಪ್ರೀಮಿಯಂ (ಮಾಸಿಕ ಅಥವಾ ವಾರ್ಷಿಕ ಕಂತು) ಹೆಚ್ಚಿದ್ದರೂ ಪರವಾಗಿಲ್ಲ. ಆದರೆ ಆಸ್ಪತ್ರೆಗೆ ದಾಖಲಾದಾಗ ನಿಮ್ಮ ಬ್ಯಾಂಕಿನಲ್ಲಿರುವ ಉಳಿತಾಯ ಕರಗದಂತೆ ಕಾಪಾಡುವ ವಿಮೆ ಯೋಜನೆ ಆಗಿರಲಿ.
3. ಪಿಪಿಎಫ್ ಖಾತೆ ತೆರೆಯಿರಿ:
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆ ತೆರೆಯಿರಿ. ಅಂಚೆ ಕಚೇರಿಗೆ ಭೇಟಿ ನೀಡಿ ಸುಲಭವಾಗಿ ಫಾರ್ಮ್ ಭರ್ತಿ ಮಾಡಿ, ಖಾತೆ ಶುರು ಮಾಡಬಹುದು. ಈ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಇದ್ದೇ ಇದೆ. ಕನಿಷ್ಠ 7% ಬಡ್ಡಿ ದರವಂತೂ ನಿಮಗೆ ಸಿಕ್ಕೇ ಸಿಗುತ್ತದೆ. ವಾರ್ಷಿಕ 500 ರೂ.ನಿಂದ 1.5 ಲಕ್ಷ ರೂ.ವರೆಗೆ ಈ ಖಾತೆಯಲ್ಲಿ ನೀವು ಉಳಿತಾಯ ಸಂಗ್ರಹಿಸಬಹುದಾಗಿದೆ. 15 ವರ್ಷಗಳಾದ ಮೇಲೆ ಮೆಚೂರ್ ಆಗಲುವ ಪಿಪಿಎಫ್ ಖಾತೆಯ ದೊಡ್ಡ ಮೊತ್ತ ಒಳ್ಳೆಯ ಕಾರ್ಯಕ್ಕೆ ನೆರವಾಗಲಿದೆ. ಇಲ್ಲವೇ ಅದೇ ಮೊತ್ತವನ್ನು ಪುನಃ 5 ವರ್ಷಗಳಿಗೆ ಪಿಪಿಎಫ್‌ನಲ್ಲೇ ಮುಂದುವರಿಸಲು ಅವಕಾಶವಿದೆ.
4. ಮನೆಯೊಂದನ್ನು ಖರೀದಿಸಿ:
ಎಷ್ಟು ದಿನಗಳವರೆಗೆ ಬಾಡಿಗೆ ಮನೆಗೆ ದುಡ್ಡು ಸುರಿಯುತ್ತೀರಿ? ವರ್ಷದಿಂದ ವರ್ಷಕ್ಕೆ ಬಾಡಿಗೆ ಹಣ ಹೆಚ್ಚುತ್ತಲೇ ಇರುತ್ತದೆ. ಬದಲಾಗಿ ಅದೇ ಹಣವನ್ನು ಮಾಸಿಕ ಕಂತಿನಂತೆ ಕಟ್ಟುವ ಮೂಲಕ ಒಂದು ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್ ಖರೀದಿಸಿರಿ. ಮೊದಲಿಗೆ ಸ್ವಲ್ಪ ಡೌನ್‌ಪೇಮೆಂಟ್ ಹಣವನ್ನು ಹೊಂದಿಸಲು ಕಷ್ಟ ಆಗಬಹುದು. ಆದರೆ, ಬ್ಯಾಂಕ್ ಲೋನ್ ಮೂಲಕ ಬಾಕಿ ಬೃಹತ್ ಮೊತ್ತವನ್ನು ಇಎಂಐಗಳಾಗಿ ವಿಂಗಡಿಸಿ, ಮಾಸಿಕ ಪಾವತಿ ಮಾಡುತ್ತಾ ಹೋಗಬಹುದು. ಕನಿಷ್ಠ ಪಕ್ಷ ನೀವು ಸುರಿಯುತ್ತಿರುವ ಹಣವು ನಿಮ್ಮದೇ ಕಾಯಂ ಆಸ್ತಿಗಾಗಿ ಆಗಿರಲಿದೆ ಎಂಬ ಸಮಾಧಾನ ನಿಮ್ಮದಾಗಿರುತ್ತದೆ.
5. ಹೂಡಿಕೆ:
ಷೇರು ಮಾರುಕಟ್ಟೆ, ಮ್ಯೂಚಲ್ ಫಂಡ್ಸ್‌ಗಳಲ್ಲಿ ಸ್ವಲ್ಪವೇ ಹಣ ಹೂಡಿಕೆ ಮಾಡುತ್ತಾ, ಆ ಕ್ಷೇತ್ರದಲ್ಲಿನ ಏರುಪೇರುಗಳ ಬಗ್ಗೆ ಅನುಭವಿಗಳಿಂದ ಕಲಿತುಕೊಳ್ಳಿರಿ. ನಿಮ್ಮ ಅದೃಷ್ಟ, ಯೋಜನೆ ಸರಿ ಇದ್ದಲ್ಲಿ ಬಹಳ ಕಡಿಮೆ ಹೂಡಿಕೆಗೆ ಭರ್ಜರಿ ಲಾಭವೇ ನಿಮ್ಮ ಕೈಸೇರಬಹುದು.