ಹಾಸನ: ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಹೆಚ್.ಡಿ. ರೇವಣ್ಣ, ಹಾಸನದಲ್ಲಿ ಯಾರನ್ನು ನಿಲ್ಲಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತೆ. ಭವಾನಿ ಎಂಎಲ್ಎ ಆಗುವುದನ್ನು ಯಾರಿಂದಲೂ ತಪ್ಪಿಸಲಾಗದು ಎಂದು ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಎಂ ಎಲ್ ಸಿ ಸ್ಥಾನಕ್ಕೂ ಭವಾನಿ ಮೇಡಂ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಭವಾನಿ ಒಂದಲ್ಲ ಒಂದು ದಿನ ಶಾಸಕರಾಗಿಯೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಮ್ಮ ಬದಲು ಹೊಳೆನರಸಿಪುರಕ್ಕೆ ಅವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ. ಈಗಲೇ ಎಂದು ಹೇಳಲ್ಲ, ಇನ್ನು 5, 10 ವರ್ಷ ಮುಂದೆ ಆಗಬಹುದು. ಭವಾನಿಗೆ ಟಿಕೆಟ್ ಕೊಡಿ ಎಂದು ಈಗ ನಾವ್ಯಾರೂ ಅರ್ಜಿ ಇಟ್ಕೊಂಡು ಹೋಗಿಲ್ಲ. ಜಿಲ್ಲಾ ಪಂಚಾಯತ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಭವಾನಿ ಒಳ್ಳೆ ಕೆಲಸ ಮಾಡಿದ್ದಾರೆ. ಎಸ್ ಎಸ್ ಎಲ್ ಸಿ ರಿಸಲ್ಟ್ ನಲ್ಲಿ ಜಿಲೆಯನ್ನು ಮೊದಲ ಸ್ಥಾನಕ್ಕೆ ತಂದರು ಎಂದು ಹೇಳಿದರು.