ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ರೈತರು ಈಗಾಗಲೇ ಕಟಾವು ಆರಂಭ ಮಾಡಿದ್ದರೂ ಸಹ ಕೊನೆಯ ಭಾಗದ ರೈತರು ನಾಟಿ ಮಾಡಿದ್ದು, ವಿಳಂಬವಾಗಿರುವ ಕಾರಣ ಭದ್ರಾ ಯೋಜನಾ ವೃತ್ತದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಗುರುವಾರದಂದು ನಡೆದ ಸಭೆಯಲ್ಲಿ ಮೇ 15ರವರೆಗೆ ನಾಲೆಗಳಲ್ಲಿ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆ ಬಳಿಕ ಮಳೆಯ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಬಿದ್ದರೆ ಮೇ 20 ರ ವರೆಗೆ ಇದನ್ನು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ. ರೈತ ಸಮುದಾಯದಿಂದ ಮನವಿ ಬಂದ ಹಿನ್ನೆಲೆಯಲ್ಲಿ ಈ ಒಂದು ತೀರ್ಮಾನಕ್ಕೆ ಬರಲಾಗಿದೆ.
ಬಿಜೆಪಿ ಸೇರ್ಪಡೆಗೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಎನ್. ಮಹೇಶ್
ನಾಲೆಗಳಲ್ಲಿ ಹೂಳು ತೆಗೆದಿರುವ ಪರಿಣಾಮ ನೀರು ಈಗಾಗಲೇ ಕೊನೆಯ ಭಾಗದ ರೈತರ ಜಮೀನುಗಳವರೆಗೆ ತಲುಪಿದ್ದು ಬೇಸಿಗೆ ಹಂಗಾಮಿನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಹೇಳಲಾಗಿದೆ. ಅಲ್ಲದೆ ಮಳೆ ಸಹ ಬರುತ್ತಿರುವ ಕಾರಣ ತೋಟದ ಬೆಳೆಗಳಿಗೂ ಸಹ ಯಾವುದೇ ಸಮಸ್ಯೆಯಾಗುವುದಿಲ್ಲ.