alex Certify ‘ಭದ್ರತಾ ಲೋಪ’ದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಪಿಐಎಲ್​ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಭದ್ರತಾ ಲೋಪ’ದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಪಿಐಎಲ್​ ಸಲ್ಲಿಕೆ

ಪಂಜಾಬ್​ನಲ್ಲಿ ಪ್ರಧಾನಿಗೆ ನೀಡಬೇಕಾದ ಭದ್ರತೆಯಲ್ಲಿ ಗಂಭೀರವಾದ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಫ್ಲೈಓವರ್​ ಮೇಲೆ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನ ಸಿಲುಕಿದ್ದರ ಬಗ್ಗೆ ತನಿಖೆ ಆರಂಭಿಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಹಿರಿಯ ವಕೀಲ ಮಣಿಂದರ್​ ಸಿಂಗ್​ ಸಿಜೆಐ ಎನ್​ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್​, ಹಿಮಾ ಕೊಹ್ಲಿ ಅವರ ಪೀಠಕ್ಕೆ ಪ್ರಧಾನಿ ಮೋದಿ ಭೇಟಿ ವೇಳೆ ಕೈಗೊಳ್ಳಲಾದ ಪೊಲೀಸ್​ ಬಂದೋಬಸ್ತ್​​ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತಕ್ಷಣವೇ ವಶಕ್ಕೆ ಪಡೆಯುವಂತೆ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಬೇಕು. ಭವಿಷ್ಯದಲ್ಲಿ ಇಂತಹ ಲೋಪಗಳು ಪುನರಾವರ್ತನೆಯಾಗದಂತೆ ತಡೆಯಲು ಸುಪ್ರೀಂ ಕೋರ್ಟ್​ ನೇತೃತ್ವದಲ್ಲಿ ನ್ಯಾಯಯುತ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು.

ಅರ್ಜಿಯ ಪ್ರತಿಯನ್ನು ಪಂಜಾಬ್​ ಸರ್ಕಾರಕ್ಕೆ ಸಲ್ಲಿಸುವಂತೆ ನ್ಯಾಯಪೀಠವು ಸಿಂಗ್​ ಅವರಿಗೆ ಸೂಚನೆ ನೀಡಿದೆ. ಹಾಗೂ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಪ್ರಧಾನಿಯವರ ಅಶ್ವದಳ ಫ್ಲೈ ಓವರ್​ನಲ್ಲಿ ಸಿಲುಕಿಹಾಕಿಕೊಳ್ಳುವುದರ ಹಿಂದೆ ಪಂಜಾಬ್​ ಸರ್ಕಾರದ ಕಡೆಯಿಂದ ಬಹುದೊಡ್ಡ ಭದ್ರತಾ ಲೋಪವಾಗಿದೆ. ಈ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ಪ್ರಕರಣದ ಕೂಲಂಕುಷ ತನಿಖೆಯನ್ನು ಸರ್ವೋಚ್ಛ ನ್ಯಾಯಾಲಯ ನಡೆಸಬೇಕು ಎಂದು ಸಿಂಗ್​ ಹೇಳಿದರು.

ಈ ಸಂದರ್ಭದಲ್ಲಿ ಮಣಿಂದರ್​ ಸಿಂಗ್​​ರನ್ನು ಪ್ರಶ್ನಿಸಿದ ನ್ಯಾಯಪೀಠವು, ನೀವು ನ್ಯಾಯಾಲಯದಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದೀರಿ..? ಭದ್ರತಾ ಲೋಪವು ಭಟಿಂಡಾದಲ್ಲಿ ಸಂಭವಿಸಿದೆಯೇ ಅಥವಾ ಫಿರೋಜ್​ಪುರದಲ್ಲಿ ಉಂಟಾಗಿದೆಯೇ ..? ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಸಿಂಗ್​ ಪ್ರಧಾನಿ ಮೋದಿ ಫೀರೋಜ್​ಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವವರಿದ್ದರು. ಆದರೆ ಭಟಿಂಡಾದಲ್ಲಿ ಭದ್ರತಾ ಲೋಪ ಸಂಭವಿಸಿದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಾರದು ಅಂದರೆ ಈ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...