ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಬಳಿಕ ಆಮ್ ಆದ್ಮಿ ಪಕ್ಷ ಪ್ರಣಾಳಿಕೆಯಲ್ಲಿ ತಾನು ನೀಡಿದ ಭರವಸೆಗಳನ್ನು ಒಂದೊಂದಾಗಿಯೇ ಈಡೇರಿಸುತ್ತಿದೆ.
ಈಗಾಗಲೇ ರೈತರಿಗೆ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಮಿತಿ ಹೆಚ್ಚಳ, ಭ್ರಷ್ಟಾಚಾರ ನಿಗ್ರಹಕ್ಕೆ ಸಹಾಯವಾಣಿ ಮೊದಲಾದ ಯೋಜನೆಗಳನ್ನು ಮುಖ್ಯಮಂತ್ರಿ ಭಗವಂತ ಮಾನ್ ಘೋಷಿಸಿದ್ದು, ಈಗ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದಾರೆ.
ಭತ್ತ ನೇರ ಬಿತ್ತನೆಗೆ ಉತ್ತೇಜನ ನೀಡುವ ಮತ್ತು ನೀರು ಉಳಿಸುವ ಉದ್ದೇಶದಿಂದ ಭತ್ತ ನೇರ ಬಿತ್ತನೆ ಮಾಡುವ ರೈತರಿಗೆ 1500 ರೂ. ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಭಗವಂತ ಮಾನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.