ಭಗವಂತ ರಾಮನ ಪರಮ ಭಕ್ತ ಹನುಮಂತ. ಇಡೀ ದಿನ ಹನುಮಂತ, ರಾಮನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ರಾತ್ರಿ ಸಮಯದಲ್ಲಿ ಭಗವಂತ ರಾಮ ವಿಶ್ರಾಂತಿ ತೆಗೆದುಕೊಂಡ ನಂತ್ರ ಹನುಮಂತ ತನ್ನ ಭಕ್ತರ ಬಗ್ಗೆ ಗಮನ ನೀಡ್ತಾನಂತೆ. ಹಾಗಾಗಿ ರಾತ್ರಿ ಹನುಮಂತನ ಧ್ಯಾನ ಮಾಡಿದ್ರೆ ಭಕ್ತರ ಕೂಗು ಹನುಮಂತನಿಗೆ ಬಹುಬೇಗ ಕೇಳಿಸುತ್ತದೆಯಂತೆ.
ಭಗವಂತ ಹನುಮಂತನ ಕೃಪೆಗೆ ಪಾತ್ರರಾಗಬಯಸಿದ್ರೆ ರಾತ್ರಿ ಹನುಮಂತನ ಪೂಜೆ ಮಾಡುವುದು ಶ್ರೇಷ್ಠ. ಜೀವನದಲ್ಲಿ ಸಂಕಷ್ಟಗಳು ಎದುರಾದ್ರೆ ರಾತ್ರಿ ಹನುಮಾನ್ ಚಾಲೀಸ್ ಪಠಣ ಮಾಡಬೇಕು. ರಾತ್ರಿ 9 ಗಂಟೆಗೆ ಹನುಮಾನ್ ಚಾಲೀಸ್ ಓದಲು ಶುರುಮಾಡಿದ್ರೆ ಪ್ರತಿದಿನ ಇದೇ ಸಮಯದಲ್ಲಿ ಹನುಮಾನ್ ಚಾಲೀಸ್ ಓದಿ. ಪಠಣ ಮಾಡುವ ಸಮಯವನ್ನು ಬದಲಾಯಿಸಬೇಡಿ. ಒಂದೇ ಸ್ಥಳದಲ್ಲಿ ಕುಳಿತು ಓದಿ. ನಿರಂತರವಾಗಿ 21 ದಿನಗಳ ಕಾಲ ಹನುಮಾನ್ ಚಾಲೀಸ್ ಓದುವುದರಿಂದ ಕಷ್ಟ ದೂರವಾಗಲಿದೆ.
ಪ್ರತಿ ಮಂಗಳವಾರ ಅಥವಾ ಶನಿವಾರ ರಾತ್ರಿ 8 ಗಂಟೆಗೆ ಹನುಮಾನ್ ಚಾಲೀಸ್ ಓದಿ. ಕೆಲವೇ ದಿನಗಳಲ್ಲಿ ಮಕ್ಕಳ ಮನಸ್ಸು ಬದಲಾಗಿ ನಿಮ್ಮ ಮಾತು ಕೇಳಲು ಶುರುಮಾಡುತ್ತಾರೆ.
ವಿದೇಶದಲ್ಲಿ ನೀವು ವಾಸವಾಗಿದ್ದು, ಅಲ್ಲಿ ಯಶಸ್ಸು ಸಿಗ್ತಿಲ್ಲವೆಂದಾದ್ರೆ ಪ್ರತಿದಿನ ರಾತ್ರಿ 8.30ಕ್ಕೆ ಹನುಮಾನ್ ಚಾಲೀಸ್ ಓದಿ. ಸಾಧ್ಯವಾದ್ರೆ 9 ದಿನಗಳಲ್ಲಿ 108 ಬಾರಿ ಹನುಮಾನ್ ಚಾಲೀಸ್ ಓದಿ.
ಹನುಮಂತನ ಪೂಜೆ ಮಾಡುವ ವೇಳೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಿ. ಹನುಮಂತನ ಪೂಜೆ ಮಾಡುವ ಸ್ಥಳ ಕೂಡ ಸ್ವಚ್ಛವಾಗಿರಲಿ.
ಹನುಮಂತನ ಪೂಜೆ ನಂತ್ರ ಅವಶ್ಯವಾಗಿ ಆರತಿ ಮಾಡಿ.
ಹನುಮಂತನಿಗೆ ಕಡಲೆ ಹಿಟ್ಟಿನಿಂದ ಮಾಡಿದ ಲಾಡನ್ನು ಅರ್ಪಿಸಿ.
ಹನುಮಂತನ ಪೂಜೆ ಮಾಡುವ ವೇಳೆ ಮನೆಯಲ್ಲಿ ಶಾಂತಿ ನೆಲೆಸಿರಲಿ. ಟಿವಿ ಅಥವಾ ಯಾವುದೇ ಹಾಡು, ಗಲಾಟೆ ಆಗದಂತೆ ನೋಡಿಕೊಳ್ಳಿ.
ಹನುಮಂತನ ಪೂಜಾ ಸ್ಥಳದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣ ಇಬ್ಬರೂ ಇರುವ ಚಿತ್ರವನ್ನು ಅವಶ್ಯವಾಗಿಡಿ.