ಹಿಂದೂ ಧರ್ಮದಲ್ಲಿ ಭಗವಂತನ ಪಾರ್ಥನೆಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ದಿನ ಭಗವಂತನ ಪ್ರಾರ್ಥನೆ ಮಾಡಬೇಕೆನ್ನಲಾಗುತ್ತದೆ. ಸಾಮಾನ್ಯವಾಗಿ ದೇವರ ಮುಂದೆ ಕೈ ಮುಗಿದು ನಿಂತು ಭಕ್ತನಾದವನು ಪ್ರಾರ್ಥನೆ ಮಾಡ್ತಾನೆ.
ದೇವರ ನಾಮ ಜಪಿಸುವ ಜೊತೆಗೆ ಕಷ್ಟ ಪರಿಹರಿಸುವಂತೆ ಬೇಡಿಕೊಳ್ತಾನೆ. ಭಕ್ತ ಮಾಡಿದ ಪ್ರಾರ್ಥನೆ ದೇವರಿಗೆ ತಲುಪಿದ್ರೆ ಎಲ್ಲ ಕಷ್ಟ ನಿವಾರಣೆಯಾದಂತೆ ಎಂಬ ನಂಬಿಕೆಯಿದೆ. ಆದ್ರೆ ಪಾರ್ಥನೆ ವೇಳೆ ಕೆಲವೊಂದು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಭಗವಂತನ ಪ್ರಾರ್ಥನೆ ಮಾಡುವ ವೇಳೆ ಗಮನ ಬೇರೆಡೆ ಹೋಗಬಾರದು. ಅನೇಕರು ಕೈ ಮುಗಿದು ಕಣ್ಣು ಮುಚ್ಚಿ ನಿಂತು ಭಗವಂತನ ನಾಮಸ್ಮರಣೆ ಮಾಡುತ್ತಿದ್ದರೂ ಮನಸ್ಸು ಮಾತ್ರ ಬೇರೆ ಸಂಗತಿಗಳನ್ನು ಯೋಚಿಸುತ್ತಿರುತ್ತದೆ. ಹೀಗೆ ಮಾಡಿದ್ರೆ ಪಾರ್ಥನೆ ಫಲ ನೀಡುವುದಿಲ್ಲ.
ಪ್ರಾರ್ಥನೆ ಮಾಡುವ ವೇಳೆ ಲೋಭಕ್ಕೆ ಒಳಗಾಗಬಾರದು. ಲೋಭವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಾರ್ಥನೆ ಮಾಡಿದ್ರೆ ಭಗವಂತ ಒಲಿಯುವುದಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಪ್ರಾರ್ಥನೆ ವೇಳೆ ಮಂತ್ರ ಬಹಳ ಮುಖ್ಯ. ಮಂತ್ರವಿಲ್ಲದೆ ಮಾಡುವ ಪ್ರಾರ್ಥನೆ ಪ್ರಯೋಜನವಿಲ್ಲವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಪಾರ್ಥನೆ ವೇಳೆ ಎಲ್ಲರೂ ಅದು ನೀಡು, ಇದು ನೀಡು ಎಂದು ಬೇಡಿಕೆಯನ್ನು ದೇವರ ಮುಂದಿಡುತ್ತಾರೆ. ಇದು ತಪ್ಪು. ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಿದ ಪಾರ್ಥನೆ ಫಲ ನೀಡುತ್ತದೆ.
ಸಂಕಷ್ಟ ಬಂದಾಗ ವೆಂಕಟರಮಣ ಎನ್ನುವ ಮಾತಿದೆ. ಅನೇಕರು ಕಷ್ಟ ಬಂದಾಗ ಮಾತ್ರ ಭಗವಂತನ ಪ್ರಾರ್ಥನೆ ಮಾಡ್ತಾರೆ. ಶಾಸ್ತ್ರಗಳ ಪ್ರಕಾರ, ಕಷ್ಟ, ಸುಖ ಎರಡರಲ್ಲೂ ಭಗವಂತನನ್ನು ನೆನೆದವರಿಗೆ ಮಾತ್ರ ಭಗವಂತ ಕೃಪೆ ತೋರುತ್ತಾನಂತೆ.