ಶಬರಿಮಲೆಯಲ್ಲಿ ಭಕ್ತರಿಗಾಗಿ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು, ಶುಕ್ರವಾರದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಯ್ಯಪ್ಪ ಸ್ವಾಮಿಯ ಮಂಡಲ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದೆ. ಗುರುವಾರದಿಂದಲೇ ಸ್ವಾಮಿಯ ದರ್ಶನಕ್ಕಾಗಿ ಭಕ್ತರು ಆಗಮಿಸುತ್ತಿದ್ದಾರೆ.
ಗುರುವಾರ ರಾತ್ರಿ ಶಬರಿಮಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಆದರೆ ಭಕ್ತರ ಉತ್ಸಾಹಕ್ಕೆ ಇದು ಕುಂದು ತಂದಿಲ್ಲ. ಮುಂಜಾನೆ 3:00 ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು, ಅಯ್ಯಪ್ಪ ದರ್ಶನ ಪಡೆದು ಪುನೀತರಾಗಿದ್ದಾರೆ.
ಮುಂಜಾನೆ 3:00 ಗಂಟೆಗೆ ದೇಗುಲದ ಬಾಗಿಲು ತೆರೆಯಲಿದ್ದು, ಶುದ್ದಿ ಮತ್ತು ಅಭಿಷೇಕ, 3:30 ಕ್ಕೆ ಗಣಪತಿ ಹೋಮ, 3:30 ರಿಂದ 7 ಗಂಟೆಯವರೆಗೆ ತುಪ್ಪದ ಅಭಿಷೇಕ, 7:30 ರಿಂದ ಉಷ ಪೂಜೆ, 8:30 ರಿಂದ 11 ರವರೆಗೆ ತುಪ್ಪದ ಅಭಿಷೇಕ, 11:10 ರಿಂದ ವಿಶೇಷ ತುಪ್ಪದ ಅಭಿಷೇಕ, 11 ರಿಂದ 11:30 ರ ವರೆಗೆ ಅಷ್ಟಾಭಿಷೇಕ, 12:30ಕ್ಕೆ ಮಧ್ಯಾಹ್ನದ ಪೂಜೆ, 1 ಗಂಟೆಗೆ ದೇಗಲ ಮುಚ್ಚಿ ಬಳಿಕ ಸಂಜೆ 3 ಗಂಟೆಗೆ ದೇಗುಲ ತೆರೆಯಲಾಗುತ್ತದೆ.
6:30ಕ್ಕೆ ದೀಪಾರಾಧನೆ, 7 ರಿಂದ ರಾತ್ರಿ 9: 30 ರ ವರೆಗೆ ಹೂವಿನ ಅಭಿಷೇಕ, 9:30 ರಿಂದ ರಾತ್ರಿ ಪೂಜೆ, 11ಕ್ಕೆ ಹರಿವಾರಸನಂ ಹಾಡಿನೊಂದಿಗೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ.