ನಂಬಿದವರಿಗೆ ಇಂಬುಕೊಡುವ ಶಾರದಾಂಬೆ, ತನ್ನ ಬಳಿ ಬರುವ ಭಕ್ತರಿಗೆ ಇಲ್ಲ ಎಂದವಳಲ್ಲ. ಆದಿಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ ಇಂದಿಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ಶಾರದಾಂಬೆ, ವೀಣಾಪಾಣಿ ತುಂಗಾತೀರ ನಿವಾಸಿನಿಯಾಗಿ, ಕುಳಿತಿದ್ದಾಳೆ. ಆಕೆಯ ಮಂದಸ್ಮಿತಕ್ಕೆ ಮರುಳಾಗದ ಭಕ್ತರಾದರೂ ಯಾರಿದ್ದಾರು.
ಆದಿ ಶಂಕರಾಚಾರ್ಯರು ದೇಶಾದ್ಯಂತ ಧರ್ಮಸಂಚಾರದಲ್ಲಿದ್ದಾಗ ನಿರ್ಮಿಸಿದ ದೇಗುಲವಿದು. ಅವರು ಗಂಧದ ಶಾರಾದಾ ದೇವಿಯ ವಿಗ್ರಹವನ್ನು ಸ್ಥಾಪಿಸಿದರು. ಮುಂದೆ ೧೪ನೆಯ ಶತಮಾನದಲ್ಲಿ ವಿದ್ಯಾರಣ್ಯರು ಇಲ್ಲಿ ಶಾರದಾಂಬೆಯು ಕುಳಿತುಕೊಂಡ ರೂಪದ ಹೊನ್ನಿನ ವಿಗ್ರಹ ಮಾಡಿ ಪ್ರತಿಷ್ಠಾಪಿಸಿದರು.
ಸಂಸ್ಕೃತದ ‘ಶೃಂಗ ಗಿರಿ’ ಎಂಬ ಪದದಿಂದ ಶೃಂಗೇರಿ ಹೆಸರು ಹುಟ್ಟಿದೆ. ಇಂದು ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆಲ್ಲ ಊಟದ ವ್ಯವಸ್ಥೆ ಇದೆ. ವಿದ್ಯಾಧಿಪತಿಯಾದ ಶಾರದಾಂಬೆ ಭಕ್ತರ ನೆಚ್ಚಿನ ಮಾತೆಯಾಗಿದ್ದಾಳೆ.