
ನೋಕಿಯಾ ಮೊಬೈಲ್ ಗೆ ಹೇಗೆ ಬ್ರ್ಯಾಂಡ್ ಇದೆಯೋ ಅದೇ ರೀತಿ ಈ ಬ್ಲಾಕ್ ಬೆರಿ ಫೋನ್ ಗೂ ತನ್ನದೇ ಆದ ಬ್ರ್ಯಾಂಡ್ ಇತ್ತು. ಒಂದು ಕಾಲದಲ್ಲಿ ಯುವಕ-ಯುವತಿಯರ ಕೈಯಲ್ಲಿ ಈ ಮೊಬೈಲ್ ರಾರಾಜಿಸುತ್ತಿತ್ತು. ಕೆನಡಾ ಮೂಲದ ಕಂಪನಿಯು ತನ್ನ ಆಪರೇಟಿಂಗ್ ಸಿಸ್ಟಮ್‌ಗೆ ಹೊಸ ನವೀಕರಣಗಳನ್ನು ಮಾಡಲು ನಿರ್ಧರಿಸಿದೆ. ಆಂಡ್ರಾಯ್ಡ್, ಆಪಲ್ ಫೋನ್ ಗಳು ಕಾಲಿಟ್ಟ ನಂತರ ಬ್ಲಾಕ್ ಬೆರಿ ಸೆಲ್ ಫೋನ್ ನಿಧಾನವಾಗಿ ಹಿಂದಕ್ಕೆ ಸರಿಯಲ್ಪಟ್ಟಿತು.
ಬ್ಲಾಕ್ ಬೆರಿಗೆ ನಟಿ ಸಮಂತಾ ರುತ್ ಪ್ರಭು ಬೇಸರದಿಂದ ವಿದಾಯ ಹೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗ್ರಾಫಿಕ್ ಅನ್ನು ಅವರು ಪೋಸ್ಟ್ ಮಾಡಿದ್ದಾರೆ. ಜನವರಿ 4ರ ನಂತರ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಿದೆ. ಇದು ಸಾಂಪ್ರದಾಯಿಕ ಸೆಲ್‌ಫೋನ್‌ನ ಯುಗದ ಅಂತ್ಯವನ್ನು ಸೂಚಿಸುತ್ತದೆ.
ಸಮಂತಾ ಮಾತ್ರವಲ್ಲದೆ ಬ್ಲಾಕ್ ಬೆರಿ ಮೊಬೈಲ್ ಅನ್ನು ಉಪಯೋಗಿಸುತ್ತಿದ್ದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ.
https://twitter.com/_RayPrice/status/1478931861812428806?ref_src=twsrc%5Etfw%7Ctwcamp%5Etweetembed%7Ctwterm%5E1478931861812428806%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fsamantha-ruth-prabhu-on-the-end-of-blackberry-this-hurt-2694124