ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ಬ್ರೊಕೊಲಿ ಸೇವನೆ ಸೂಕ್ತ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಬ್ರೊಕೋಲಿಯನ್ನು ಸೇವನೆ ಮಾಡುವುದರಿಂದ ನಮ್ಮ ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತದೆ. ಬ್ರೊಕೊಲಿ ಮತ್ತು ಇತರ ಕ್ರೂಸಿಫೆರಸ್ ತರಕಾರಿಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಬಲ್ಲವು.
ಅದರಲ್ಲೂ ಸ್ತನ ಕ್ಯಾನ್ಸರ್ ಮೊದಲ ಹಂತದಲ್ಲಿ ಪತ್ತೆಯಾದರೆ ಅಂಥವರು ಬ್ರೊಕೊಲಿಯನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ಅದನ್ನು ನಿಯಂತ್ರಣದಲ್ಲಿಡಬಹುದು. ವ್ಯಕ್ತಿಗೆ ಕ್ಯಾನ್ಸರ್‌ಗೆ ತುತ್ತಾಗಲು ಜೀನ್‌ಗಳು ಪ್ರಮುಖ ಪಾತ್ರವಹಿಸುತ್ತವೆ. lncRNA ವಂಶವಾಹಿಯಲ್ಲಿ ದುರ್ಬಲಗೊಂಡ ನಂತರ ರೋಗವು ಯಾವುದೇ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. lncRNAಗಳ ಮೂಲಕ ಜೀನ್‌ಗಳು ತಮ್ಮ ಕೆಲಸವನ್ನು ನಡೆಸುತ್ತವೆ. lncRNA ಗಳನ್ನು ಅನಿಯಂತ್ರಿತಗೊಳಿಸಿದಾಗ, ಅವರು ಯಾವುದೇ ಕಾಯಿಲೆಯ ಬೆಳವಣಿಗೆಯನ್ನು ಉತ್ತೇಜಿಸಬಹುದು.
ಹೊಸ ಸಂಶೋಧನೆಯಲ್ಲಿ, ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಬರುವಲ್ಲಿ lncRNA ಗಳ ಪಾತ್ರವು ಬಹಳ ಮುಖ್ಯವಾಗಿದೆ ಎಂದು ಕಂಡುಬಂದಿದೆ. ಬ್ರೊಕೊಲಿಯಲ್ಲಿ ಕಂಡುಬರುವ ಸಲ್ಫೊರಾಫೇನ್ ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಮಹಿಳೆಯರು ಕೋಸುಗಡ್ಡೆ, ಹೂಕೋಸು, ಎಲೆಕೋಸು ಅಥವಾ ಬ್ರೊಕೊಲಿಯನ್ನು ಸೇವನೆ ಮಾಡಬೇಕು. ಇದು ಕ್ಯಾನ್ಸರ್ ಕೋಶಗಳಲ್ಲಿ ಸಲ್ಫೊರಾಫೇನ್ ಹಿಸ್ಟೋನ್ ಡೀಸೆಟೈಲೇಸ್ ಅಥವಾ HDAC ಗಳನ್ನು ಪ್ರತಿಬಂಧಿಸುತ್ತದೆ. ಇದರ ಜೊತೆಗೆ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ಇತರೆ ತರಕಾರಿಗಳನ್ನೂ ನಿಮ್ಮ ಡಯಟ್‌ನಲ್ಲಿ ಸೇರಿಸಿ.
ಟೊಮೆಟೊ : ಟೊಮೆಟೊ ಟೇಸ್ಟಿ ಮಾತ್ರವಲ್ಲ, ಪೌಷ್ಟಿಕವಾಗಿದೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕೂಡ ಕ್ಯಾನ್ಸರ್ ನಿಯಂತ್ರಿಸಬಲ್ಲದು. ಟೊಮೆಟೊಗಳು ಲೈಕೋಪೀನ್ ಅನ್ನು ಹೊಂದಿರುತ್ತವೆ. ಇದು ಎಂಟಿಒಕ್ಸಿಡೆಂಟ್ ಫೈಟೊಕೆಮಿಕಲ್ ಆಗಿದ್ದು, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಎ, ಸಿ ಮತ್ತು ಇ ಕೂಡ ಟೊಮೆಟೋದಲ್ಲಿ ಹೇರಳವಾಗಿದೆ.
ಹೂಕೋಸು: ಹೂಕೋಸು ಅತ್ಯಂತ ರುಚಿಯಾದ ತರಕಾರಿಗಳಲ್ಲೊಂದು. ಇದು ಕೂಡ ನಮ್ಮ ದೇಹದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎಲೆಕೋಸು ಮತ್ತು ಹೂಕೋಸು, ಸ್ತನ ಕ್ಯಾನ್ಸರ್, ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ.